ನೀತಿ ಸಂಹಿತೆ ಉಲ್ಲಂಘನೆ ಆರೋಪ ಸಾಬೀತು, ಯೋಗಿ-ಮಾಯಾವತಿಗೆ ಬ್ಯಾನ್ ಭಾಗ್ಯ..!

ಉತ್ತರಪ್ರದೇಶ: ಅಪರೂಪದ ಪ್ರಕರಣವೊಂದರಲ್ಲಿ ರಾಜ್ಯ ಚುನಾವಣಾ ಆಯೋಗವು ಖಡಕ್ ನಿರ್ಧಾರ ತೆಗೆದುಕೊಂಡಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಮತ್ತು ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಅವರಿಗೆ ಚುನಾವಣಾ ಪ್ರಚಾರದಿಂದ ನಿಷೇಧ ಹೇರಿದೆ. ಇವರಿಬ್ಬರೂ ಪ್ರಚಾರ ಭಾಷಣಗಳಲ್ಲಿ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಇದರೊಂದಿಗೆ ಚುನಾವಣಾ ನೀತಿ ಸಂಹಿತೆಯನ್ನ ಉಲ್ಲಂಘಿಸಿದ್ದಾರೆ. ಹಾಗಾಗಿ ಯೋಗಿ ಆದಿತ್ಯನಾಥ್​​ 72 ಗಂಟೆ ಕಾಲ ಮತ್ತು ಮಾಯಾವತಿ 48 ಗಂಟೆ ಕಾಲ ಚುನಾವಣಾ ಪ್ರಚಾರ ನಡೆಸುವಂತಿಲ್ಲ ಎಂದು ಆಯೋಗ ಆದೇಶಿಸಿದೆ. ಇದು, ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬರಲಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv