ನೀತಿ ಸಂಹಿತೆ ಉಲ್ಲಂಘನೆ, ಅಜಂ ಖಾನ್​​-ಮನೇಕಾ ಗಾಂಧಿಗೂ ಬ್ಯಾನ್ ಭಾಗ್ಯ..!

ಉತ್ತರಪ್ರದೇಶ: ರಾಜ್ಯ ಚುನಾವಣಾ ಆಯೋಗವು ಮತ್ತೊಮ್ಮೆ ಖಡಕ್ ನಿರ್ಧಾರ ತೆಗೆದುಕೊಂಡಿದ್ದು, ಸಮಾಜವಾದಿ ಪಕ್ಷದ ಅಜಂ ಖಾನ್ ಮತ್ತು ಕೇಂದ್ರ ಸಚಿವೆ, ಬಿಜೆಪಿ ನಾಯಕಿ ಮನೇಕಾ ಗಾಂಧಿ ಅವರಿಗೆ ನಿಷೇಧ ಹೇರಿದೆ. ಇಬ್ಬರೂ ಚುನಾವಣಾ ನೀತಿ ಸಂಹಿತೆಯನ್ನ ಉಲ್ಲಂಘಿಸಿದ್ದಾರೆ. ಹಾಗಾಗಿ ಅಜಂ ಖಾನ್ 72 ಗಂಟೆ ಕಾಲ ಮತ್ತು ಮನೇಕಾ ಗಾಂಧಿ 48 ಗಂಟೆ ಕಾಲ ಚುನಾವಣಾ ಪ್ರಚಾರ ನಡೆಸುವಂತಿಲ್ಲ ಎಂದು ಆಯೋಗ ಆದೇಶಿಸಿದೆ. ಇದು ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಜಾರಿಗೆ ಬರಲಿದೆ.