ಮೀನುಗಾರರು ಶ್ರೀರಾಮನ ವಿಶ್ವಸನೀಯ ಭಕ್ತರು: ಯೋಗಿ ಆದಿತ್ಯನಾಥ್

ಉಡುಪಿ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಇಂದು ಬೈಂದೂರು ಬಿಜೆಪಿ ಅಭ್ಯರ್ಥಿ ಸುಕುಮಾರ್ ಶೆಟ್ಟಿ ಪರ ಪ್ರಚಾರ ನಡೆಸಿದರು. ಇದೇ ವೇಳೆ ಮಾತನಾಡಿದ ಅವರು, ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಕಠಿಣ ದಿನಗಳನ್ನ ಕಂಡಿದೆ. ಭಾರತ ಮಾತೆಯ ಮೂಲಕ ನಾವೆಲ್ಲರೂ ಸಂಬಂಧಿಗಳೇ, ಅಲ್ಲದೆ ರಾಷ್ಟ್ರೀಯತೆಗೆ ನಾವು ಸಮರ್ಪಿತರು ಅಂತಾ ಹೇಳಿದ್ರು. ಈ ವೇಳೆ, ಪ್ರಧಾನಿ ಮೋದಿಯವರ ಕೈ ಬಲಪಡಿಸಲು ನಾವೆಲ್ಲಾ ಸೇರಿದ್ದೇವೆ. ಮೀನುಗಾರರು ಶ್ರೀರಾಮನ ವಿಶ್ವಸನೀಯ ಭಕ್ತರು. ಕರಾವಳಿಯಲ್ಲಿರುವ ಮೀನುಗಾರರು ಬಿಜೆಪಿ ಬೆಂಬಲಿಗರಾಗಿರುವುದು ನನಗೆ ತುಂಬಾ ಸಂತೋಷ ನೀಡಿದೆ ಅಂತಾ ಅಭಿಮಾನ ವ್ಯಕ್ತಪಡಿಸಿದ್ರು.