ಸುಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ!

ಬೆಂಗಳೂರಿನ: ನಗರದ ಹೊರವಲಯದಲ್ಲಿ ಅಪರಿಚಿತ ಯುವಕನ ಸುಟ್ಟ ಶವ ಪತ್ತೆಯಾಗಿದೆ. ಸಿಆರ್​ಪಿಎಫ್‌ ಕ್ಯಾಂಪ್ ಹಿಂಭಾಗದ ಅರಣ್ಯ ಪ್ರದೇಶದಲ್ಲಿ ಶವ ಪತ್ತೆಯಾಗಿದೆ. ಹಳೇ ವೈಷಮ್ಯದ ಹಿನ್ನಲೆಯಲ್ಲಿ ಯುವಕನನ್ನ ಹತ್ಯೆ ಮಾಡಿ ಬಳಿಕ ಕೈ ಕಾಲು ಕಟ್ಟಿ, ಶವವನ್ನು ಸುಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರಿಗೆ ಗುರುತು ಸಿಗದಿರಲಿ ಎಂಬ ಕಾರಣಕ್ಕೆ ಶವ ಸುಟ್ಟಿರುವ ಅನುಮಾನ ಕಾಡುತ್ತಿದೆ. ಕಗ್ಗಲಿಪುರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv