ಉ.ಕರ್ನಾಟಕ ಮಹಿಳಾ ಸಂಘಗಳ ಒಕ್ಕೂಟದಿಂದ ಸುಮಲತಾ ಅಂಬರೀಶ್‌ಗೆ ಬೆಂಬಲ

ಧಾರವಾಡ: ನಗರದಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳ ಮಹಿಳಾ ಸಂಘಗಳ ಒಕ್ಕೂಟದಿಂದ ಸುಮಲತಾಗೆ ಬೆಂಬಲಿಸಿ ಸಭೆ ನಡೆಸಲಾಯಿತು. ಧಾರವಾಡ ಜಯನಗರ ಉದ್ಯಾನದಲ್ಲಿ ನಡೆದ ಸಭೆಯಲ್ಲಿ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರಿಗೆ ಬೆಂಬಲ ವ್ಯಕ್ತಪಡಿಸಲಾಗಿದೆ. ಸುಮಲತಾ ದಿಟ್ಟ ಮಹಿಳೆಯಾಗಿ ಸ್ಪರ್ಧೆಗಿಳಿದಿದ್ದು, ಅವರ ಪರ ರಾಜ್ಯದ ಮಹಿಳೆಯರೆಲ್ಲ ನಿಲ್ಲುವಂತೆ ಸಭೆ ಮೂಲಕ ಮನವಿ ಮಾಡಲಾಯಿತು.ಮಂಡ್ಯದಲ್ಲಿ ಮತ ಇಲ್ಲದೇ ಇದ್ದರೂ ನೈತಿಕ ಬೆಂಬಲದ ಮೂಲಕ ಸುಮಲತಾಗೆ ಶಕ್ತಿ ತುಂಬಲು ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಎದುರು ಪಕ್ಷೇತರ ಅಬ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡುತ್ತಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv