ಅನಂತ್ ಕುಮಾರ್​​ ಹೆಗಡೆ ಮನೆಗೆ ಬಂದು ‘ಎಲೆಕ್ಷನ್​​ನಲ್ಲಿ ಗೆಲ್ಲೋದಾಗಿ’ ಹರಸಿದ ನಾಗ ಸಾಧುಗಳು

ಶಿರಸಿ (ಉತ್ತರ ಕನ್ನಡ): ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಮನೆಗೆ ಉತ್ತರ ಪ್ರದೇಶದ ನಾಗ ಸಾಧುಗಳು ಬಂದು ಆಶೀರ್ವದಿಸಿದರು. ಉತ್ತರ ಕನ್ನಡದ ಶಿರಸಿಯಲ್ಲಿರುವ ಅನಂತ ಕುಮಾರ ಹೆಗಡೆ ನಿವಾಸಕ್ಕೆ ಬೆಳಗ್ಗೆ ಸಾಧುಗಳು ಆಗಮಿಸಿದ್ದರು. ಶ್ರೀ ಮಹಾಂತ ನಾಗಗಿರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಮನೆಗೆ ಬಂದ ನಾಗ ಸ್ವಾಮೀಜಿಗಳನ್ನ ಹೆಗಡೆ ದಂಪತಿಗಳು ಪೂಜಿಸಿ ಆಶೀರ್ವಾದ ಪಡೆದರು. ಸುಮಾರು ಒಂದು ಗಂಟೆಗಳ ಕಾಲ ಮನೆಯಲ್ಲಿದ್ದ ನಾಗ ಸಾಧುಗಳು ಚುನಾವಣೆಯಲ್ಲಿ ಗೆಲ್ಲುವುದಾಗಿ ಹರಸಿದ್ದಾರೆ ಎನ್ನಲಾಗಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv