ಎರಡು ವರ್ಷದಲ್ಲಿ ₹8.5 ಲಕ್ಷ ಗಳಿಸಿದ ‘ನಿರುದ್ಯೋಗಿ’ ಕನ್ಹಯ್ಯ ಕುಮಾ​ರ್​

ಪಾಟ್ನಾ: ದೆಹಲಿಯ ಜೆಎನ್​ಯು ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಮಾಜಿ ಮುಖಂಡ ಕನ್ಹಯ್ಯ ಕುಮಾರ್​ ಸಿಪಿಐ ಪಕ್ಷದ ಅಭ್ಯರ್ಥಿಯಾಗಿ ಬೇಗುಸರಾಯ್ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾಧಿಕಾರಿಗೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ಕಳೆದ ಎರಡು ವರ್ಷದಲ್ಲಿ 8.5 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾಗಿ ಘೋಷಿಸಿಕೊಂಡಿದ್ದಾರೆ. ಜೊತೆಗೆ ತಾನೊಬ್ಬ ನಿರುದ್ಯೋಗಿ ಅಂತಾನೂ ಅಫಿಡವಿಟ್​ನಲ್ಲಿ ಉಲ್ಲೇಖಿಸಿದ್ದಾರೆ.
ಜೀವನ ಸಾಗಿಸಲು ಅರೆಕಾಲಿಕ ಬರಹಗಾರನಾಗಿ ಹಾಗೂ ಕೆಲ ವಿದ್ಯಾನಿಲಯಗಳಿಗೆ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ಬರೆದ ‘ಬಿಹಾರ್​ ಟು ತಿಹಾರ್​’ ಪುಸ್ತಕ ಮಾರಾಟದಿಂದ ಕಳೆದೆರೆಡು ವರ್ಷದಿಂದ ಆದಾಯ ಗಳಿಸುತ್ತಿದ್ದೇನೆ ಅಂತಾ ಕನ್ಹಯ್ಯ ಕುಮಾರ್​ ಅಫಿಡವಿಟ್​ನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಕನ್ಹಯ್ಯ ಕುಮಾರ್​ ವಿರುದ್ದ 5 ಪ್ರಕರಣಗಳಿವೆ. ಜೊತೆಗೆ ಕೈಯಲ್ಲಿ 24,000 ರೂಪಾಯಿ ನಗದು , ಬ್ಯಾಂಕ್ ಖಾತೆಯಲ್ಲಿ 3,57, 848 ರೂಪಾಯಿ ಠೇವಣಿ ಹೊಂದಿದ್ದೇನೆ. ಸ್ವಂತ ಕೃಷಿ ಭೂಮಿ ಇಲ್ಲ , ಅಪ್ಪ ರೈತನಾಗಿದ್ದು, ಅಮ್ಮ ಅಂಗನವಾಡಿ ಕಾರ್ಯಕರ್ತೆಯಾಗಿದ್ದಾರೆ ಎಂದು ಅಫಿಡವಿಟ್‍ನಲ್ಲಿ ಉಲ್ಲೇಖಿಸಲಾಗಿದೆ.
2016ರಲ್ಲಿ ಜೆಎನ್​ಯು ವಿಶ್ವವಿದ್ಯಾಲಯದ ಆವರಣದಲ್ಲಿ ಉಗ್ರ ಅಫ್ಜಲ್​ ಗುರು ಪರ ಘೋಷಣೆ ಕೂಗಿ ದೇಶದ್ರೋಹದ ಆಧಾರದ ಮೇಲೆ ಕನ್ಹಯ್ಯ ಕುಮಾರ್ ಬಂಧಿತನಾಗಿ ಪ್ರಚಾರಕ್ಕೆ ಬಂದಿದ್ದರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv