ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ..? ಹಾಗಾದ್ರೆ ಇದನ್ನು ಸೇವಿಸಿ

ನಿದ್ರೆ ಪ್ರತಿಯೊಬ್ಬ ಮನುಷ್ಯನಿಗೂ ಅವಶ್ಯಕ. ವ್ಯಕ್ತಿ ಆರೋಗ್ಯವಾಗಿರಬೇಕು ಅಂದ್ರೆ ಕನಿಷ್ಟ ಪಕ್ಷ 6-7 ಗಂಟೆ ನಿದ್ರೆ ಮಾಡ್ಲೇಬೇಕು. ಆದರೆ ಕೆಲವೊಬ್ಬರು ನಿದ್ರಾಹೀನತೆಯಿಂದ ಬಳಲುತ್ತಿರುತ್ತಾರೆ. ನಿದ್ರೆ ಮಾಡೋಕೆ ಎಷ್ಟೇ ಟ್ರೈ ಮಾಡಿದ್ರೂ ನಿದ್ರೆ ಬರಲ್ಲ. ಒತ್ತಡ, ಖಿನ್ನತೆ, ವಯಸ್ಸಾಗುವಿಕೆ ಮತ್ತು ಜೀವನಶೈಲಿಗೆ ಸಂಬಂಧಿಸಿದ ಅಂಶಗಳು ನಿದ್ರಾಹೀನತೆಗೆ ಕಾರಣವಾಗಬಹುದು. ಇಂತಹ ಸಮಸ್ಯೆಯನ್ನ ಇನ್​​ಸೋಮ್ನಿಯಾ ಎಂದು ಕರೆಯುತ್ತಾರೆ. ಇದಕ್ಕೆ ಸಿಂಪಲ್​ ಹಾಗೂ ಸುಲಭವಾದ ಆಯುರ್ವೇದ ಪರಿಹಾರ ಅಂದ್ರೆ ಅಶ್ವಗಂಧ

ಅಶ್ವಗಂಧವು ಇಮ್ಯೂನಿಟಿ​ ಸಿಸ್ಟಮ್​, ನ್ಯೂರೋಲಾಜಿಕಲ್​ ಸಿಸ್ಟಮ್​, ಸಂತಾನೋತ್ಪತ್ತಿ ವ್ಯವಸ್ಥೆ, ಎನ್​ಡೋಕ್ರಿನಿಕಲ್​ ಸಿಸ್ಟಮ್​ ಸೇರಿದಂತೆ ದೇಹದಲ್ಲಿರುವ ವಿವಿಧ ವ್ಯವಸ್ಥೆಗಳ ಮೇಲೆ ಕಾರ್ಯನಿರ್ವಹಿಸುವ ಆಯುರ್ವೇದ ಮೂಲಿಕೆಯಾಗಿದೆ.

1. ಅಶ್ವಗಂಧ ಆಯುರ್ವೇದದಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನ ಪಡೆದುಕೊಂಡಿದೆ. ಇದು ನಿಮ್ಮ ಆರೋಗ್ಯ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ.

2. ಥೈರಾಯ್ಡ್​​ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಿ ಜೀರ್ಣಕ್ರಿಯೆಯನ್ನ ಹೆಚ್ಚಿಸುತ್ತದೆ.

3. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಿ ಸೋಂಕನ್ನು ತಡೆಗಟ್ಟುವಲ್ಲಿ ಮತ್ತು ಸೋಂಕಿನಿಂದ ವೇಗವಾಗಿ ಚೇತರಿಸಿಕೊಳ್ಳುಲು ಸಹಾಯ ಮಾಡುತ್ತದೆ.

4. ದೇಹದಲ್ಲಿ ಕಾರ್ಟಿಸೋಲ್(ಒತ್ತಡ ಹಾರ್ಮೋನ್) ಮಟ್ಟವನ್ನು ತಗ್ಗಿಸುವ ಮೂಲಕ ಒತ್ತಡವನ್ನು ಕಡಿಮೆ ಮಾಡುತ್ತದೆ.

5. ಅಶ್ವಗಂಧವು ಮೆದುಳಿನ ಜೀವಕೋಶಗಳಿಗೆ ಹಾನಿಯಾಗದಂತೆ ತಡೆಯುತ್ತದೆ.

ದಿನಕ್ಕೆ ಎರಡು ಬಾರಿ ನೀವು 300 ಮಿಲಿ ಗ್ರಾಂ ಅಶ್ವಗಂಧ ಸೇವಿಸಿದ್ರೆ ನಿದ್ರಾಹೀನತೆ ದೂರ ಮಾಡಬಹುದು. ಇದರ ಜೊತೆಗೆ ಪ್ರತಿದಿನ 1-2 ಸ್ಪೂನ್​​  ಅಶ್ವಗಂಧದ ಬೇರಿನ ಟಾನಿಕ್​​ ಸೇವಿಸಬಹುದು.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv