ಮಂಡೆ ಮೇಲೆ ಬಂಡೆ ಬಿದ್ರೆ ಎಂತಾ ಆಗ್ತದೆ ಗೊತ್ತುಂಟಾ?

ವಾಹನ ಸವಾರರೇ ಎಚ್ಚರ.. ನೀವು ನಡೆಯುವ ದಾರಿಯಲ್ಲಿ ಯಾವಾಗ ಏನು ಬೇಕಾದರು ಸಂಭವಿಸಬಹುದು. ನೀವು ಸರಿಯಾದ ದಾರಿಯಲ್ಲಿ ನಡೆದರೂ ಕೆಲವು ಬಾರಿ ಪ್ರಕೃತಿ ನಿಮ್ಮ ಮೇಲೆ ಎರಗುವ ಸಾಧ್ಯತೆ ಇದೆ. ಇದಕ್ಕೆ ಸಾಕ್ಷಿಯೆಂಬಂತೆ ಚೀನಾದಲ್ಲೊಂದು ಘಟನೆ ನಡೆದಿದೆ. ನಿನ್ನೆ ನೈರುತ್ಯ ಚೀನಾದಲ್ಲಿ ಗುಡ್ಡದ ಮೇಲಿಂದ ಬೃಹತ್​ ಬಂಡೆಯೊಂದು ಕಾರಿನ ಮೇಲೆ ಬಿದ್ದು ಕಾರು ನಜ್ಜುಗುಜ್ಜಾಗಿದೆ. ಬಂಡೆ ಬಿದ್ದ ರಭಸಕ್ಕೆ ಪಕ್ಕದಲ್ಲೆ ಇದ್ದ ಮರವೊಂದು ಕೂಡ ಪುಡಿ ಪುಡಿಯಾಗಿದೆ. ಅದೃಷ್ಟವಶಾತ್​ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಾವು ನೋವು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv