‘ಖರ್ಗೆರನ್ನ ಅಂಬೇಡ್ಕರ್ ಅಂತಾ ತಿಳಿಕೊಂಡಿದ್ವಿ, ಆದ್ರೆ..’ -ಉಮೇಶ್ ಜಾಧವ್

ಕಲಬುರಗಿ: ಮೂರು ತಿಂಗಳ ಹಿಂದೆ ನನ್ನನ್ನು ದಕ್ಷಿಣ ಭಾರತದ ಅಂಬೇಡ್ಕರ್ ಅಂದವ್ರು ಇಂದು‌ ನನ್ನ ವಿರುದ್ಧ ಪ್ರಚಾರ ಮಾಡ್ತಿದಾರೆ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರವಾಗಿ ಇಂದು ನಗರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಪ್ರತಿಕ್ರಿಯಿಸಿದ್ದಾರೆ.  ಮೂರು ತಿಂಗಳ ಹಿಂದೆ ನಾವು ಮಲ್ಲಿಕಾರ್ಜುನ ಖರ್ಗೆರನ್ನು ಅಂಬೇಡ್ಕರ್ ಅಂತಾ ತಿಳಿಕೊಂಡಿದ್ವಿ ಸಂಪುಟ ವಿಸ್ತರಣೆ ವೇಳೆ ಈ ಭಾಗದ ಯಾರನ್ನಾದರೂ ಮಂತ್ರಿ ಮಾಡ್ತಾರೆ, ಅಜಯ್ ಸಿಂಗ್‌ರನ್ನ ಮಂತ್ರಿ ಮಾಡ್ತಾರೆ ಪವರ್ ಶೇರ್ ಮಾಡ್ತಾರೆ ಅಂದುಕೊಂಡಿದ್ವಿ. ಆದ್ರೆ,  ಎಲ್ಲಾ‌ ಬಿಟ್ಟು ಅವರ ಮಗನನ್ನು ಮಿನಿಸ್ಟರ್ ಮಾಡಿದ್ದಕ್ಕೆ ನಮಗೆ ಬೇಜಾರಾಗಿದೆ ಎಂದರು.  ಇನ್ನು ಇದೇ ವೇಳೆ, ಬಿಜೆಪಿಯವರು ವೈಯಕ್ತಿಕ ತೇಜೋವಧೆಗೆ ಮುಂದಾಗಿದ್ದಾರೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿದ ಉಮೇಶ್​​ ಜಾಧವ್​,  ನಾವು ಯಾರ ವೈಯಕ್ತಿಕ ತೇಜೋವಧೆಗೂ ಮುಂದಾಗಿಲ್ಲ, ಅವರು ನನ್ನ ಕ್ಯಾರೆಕ್ಟರ್ ಅಸಾಸಿನೇಷನ್ ಮಾಡಲಿಕ್ಕೆ ಹೋಗುತ್ತಿದ್ದಾರೆ. ಡಾ.ಜಾಧವ್ ಯಾವುದೋ ಆಮಿಷಕ್ಕೆ ಒಳಗೆ ಹೋಗಿದಾರೆ ಅಂತಾ ಕ್ಯಾರೆಕ್ಟರ್ ಅಸಾಸಿನೇನ್ ಮಾಡಲಿಕ್ಕೆ ಹೋಗ್ತಿದಾರೆ. ಜಾತಿ ಜಾತಿ ಮಧ್ಯೆ ವಿಷ ಬೀಜ ಬಿತ್ತುತ್ತಿದ್ದಿದ್ದಾರೆ ಎಂಬ ಆರೋಪ ಸುಳ್ಳು. ಬಂಜಾರಾ ಸಮುದಾಯ ಅಷ್ಟೇ ಅಲ್ಲ ಎಲ್ಲಾ ಸಮುದಾಯದವರು ನಮ್ಮ ಜೊತೆಗಿದ್ದಾರೆ. ಪಿ.ಟಿ.ಪರಮೇಶ್ವರ್ ನಾಯಕ್‌ರನ್ನು ಮಂತ್ರಿ ಮಾಡಿದ್ದು ಮಲ್ಲಿಕಾರ್ಜುನ ಖರ್ಗೆ, ಹೀಗಾಗಿ ಅವರ ಪರ ಪ್ರಚಾರಕ್ಕೆ ಬಂದಿದಾರೆ. ಮೊನ್ನೆ ಅವರು ದುಡ್ಡು ಹಂಚುತ್ತಿದ್ದರೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ ಈ ಬಗ್ಗೆ ತನಿಖೆಯಾಗಬೇಕು ಎಂದು  ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಮಾತನಾಡಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv