ಬಹಿರಂಗ ಪ್ರಚಾರ ಅಂತ್ಯ, ಮದ್ಯ ಬ್ಯಾನ್‌!

ಉಡುಪಿ: ಇಂದು ಸಂಜೆ 6 ಗಂಟೆಗೆ ರಾಜಕೀಯ ಪಕ್ಷಗಳ ಬಹಿರಂಗ ಚುನಾವಣಾ ಪ್ರಚಾರ ಅಂತ್ಯವಾಗಲಿದೆ. ಅಲ್ಲದೇ ಸಂಜೆ 6 ಗಂಟೆಯಿಂದ ಮೇ 12ರವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.

ಮತದಾರರ ಅನುಕೂಲಕ್ಕಾಗಿ ಚುನಾವಣಾ ಆಯೋಗವು ಚುನಾವಣಾ ಆ್ಯಪ್‍ನ್ನು ಸಿದ್ಧಪಡಿಸಿದೆ. ಈ ಆ್ಯಪ್ ಮೂಲಕ ಉಡುಪಿ, ಕುಂದಾಪುರ ಮತ್ತು ಕಾರ್ಕಳ ವಿಧಾನಸಭಾ ವ್ಯಾಪ್ತಿಯ ನಗರ ಪ್ರದೇಶದಲ್ಲಿರುವ ಮತಗಟ್ಟೆಗಳ ಮತದಾರರ ಸಾಲಿನ ಮಾಹಿತಿಯನ್ನು ಪ್ರತೀ 10 ನಿಮಿಷಗಳಿಗೊಮ್ಮೆ ಪಡೆಯಬಹುದು. ವಿಕಲ ಚೇತನ ಮತದಾರರ ಅನುಕೂಲಕ್ಕಾಗಿ 555 ಮತಗಟ್ಟೆ ಪ್ರದೇಶಗಳಿಗೆ ವೀಲ್ ಚೇರ್ ಸೌಲಭ್ಯ ಮತ್ತು ದೃಷ್ಟಿ ಮಂದವುಳ್ಳ ಮತದಾರರಿಗಾಗಿ 328 ಮತಗಟ್ಟೆ ಪ್ರದೇಶಗಳಿಗೆ ಬೂತ ಕನ್ನಡಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ, ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗಳಿಗೆ ಮೇ. 12ರಂದು ಬೆಳಗ್ಗೆ 5.30ಕ್ಕೆ ಸರ್ಕಾರಿ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದ್ರು. ಇನ್ನೂ ಇಂದು ಸಂಜೆ 6 ಗಂಟೆಯಿಂದ ರಾಜಕೀಯ ನಾಯಕರ ಜಾಹೀರಾತನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದನ್ನು ನಿರ್ಬಂಧಿಸಲಾಗಿದೆ. ಇದೇ ಮೊದಲ ಬಾರಿ ಸಾಮಾಜಿಕ ಜಾಲತಾಣಗಳಿಗೂ ನಿರ್ಬಂಧ ಹೇರಲಾಗಿದೆ ಎಂದರು.