ಮಹಿಳೆ ಜೊತೆ ಉಬರ್ ಚಾಲಕ ಮಿಸ್​ಬಿಹೇವ್​! ಮುಂದೇನಾಯ್ತು..?

ಬೆಂಗಳೂರು: ನಗರದಲ್ಲಿ ಉಬರ್ ಚಾಲಕನೊಬ್ಬ ಮಹಿಳಾ ಟೆಕ್ಕಿಯ ಜೊತೆ ಅನುಚಿತವಾಗಿ ವರ್ತಿಸಿರುವ ಆರೋಪ ಕೇಳಿ ಬಂದಿದೆ. ಕೆಲಸಕ್ಕೆ ಹೋಗುವ ವೇಳೆ ಯುವತಿ ಉಬರ್​ ಟ್ಯಾಕ್ಸಿಯನ್ನು ಎಚ್‌ಎಸ್‌ಆರ್ ಲೇಔಟ್​ನಿಂದ ಬೆಳ್ಳಂದೂರಿಗೆ ಬುಕ್​ ಮಾಡಿದ್ದರು. ಆದರೆ ಚಾಲಕ ದಾರಿಯಲ್ಲಿ ಮಾರ್ಗ ಬದಲಾವಣೆ ಮಾಡಿದ್ದ. ಮಾರ್ಗ ಬದಲಿಸಿದ್ದನ್ನ ಪ್ರಶ್ನಿಸಿದ ಟೆಕ್ಕಿಯ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಈ ಕ್ಷಣವೇ ಟ್ರಿಪ್​ ರದ್ದು ಪಡಿಸುತ್ತೇನೆ, ಏನು ಬೇಕಾದರೂ ಮಾಡಿಕೊಳ್ಳಿ ಎಂದು ದುಂಡಾವರ್ತನೆ ತೋರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರ್ಗ ಮಧ್ಯೆಯೇ ಯುವತಿಯನ್ನು ಬಿಟ್ಟು ಹೋಗಿದ್ದಾನೆ. ಉಬರ್ ಕ್ಯಾಬ್‌ ಕೆಎ 42, ಎ-4692 ಇಟಿಯೋಸ್ ಕಾರಿನಲ್ಲಿ ಕಂಪನಿಗೆ ತೆರಳುತ್ತಿದ್ದ ಮಹಿಳಾ ಟೆಕ್ಕಿ, ಟ್ವಿಟರ್ ಮೂಲಕ ಈ ವಿಚಾರ ಹಂಚಿಕೊಂಡ ಟೆಕ್ಕಿ, ನಗರ ಪೊಲೀಸ್ ಆಯುಕ್ತರನ್ನು ಟ್ಯಾಗ್​ ಮಾಡಿದ್ದಾರೆ. ಜೀವನ್‌ ಭೀಮಾನಗರ ಹಾಗೂ ಚಿಕ್ಕಜಾಲದಲ್ಲಿಯೂ ಇಂತಹುದೆ ಎರಡು ಪ್ರಕರಣಗಳು ಬೆಳಕಿಗೆ ಬಂದಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv