ಧರಣಿನಿರತ ಇಬ್ಬರು ಮಹಿಳಾ ಪೌರ ಕಾರ್ಮಿಕರು ಅಸ್ವಸ್ಥ

ಧಾರವಾಡ: ಧರಣಿನಿರತ ಇಬ್ಬರು ಮಹಿಳಾ ಪೌರ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ನೇರ ವೇತನ ಪಾವತಿಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ನಿನ್ನೆಯಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆಯಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಸತತವಾಗಿ ಧರಣಿಯಲ್ಲೇ ನಿರತರಾಗಿರುವ ಇಬ್ಬರು ಮಹಿಳಾ ಕಾರ್ಮಿಕರು ಇಂದು ಅಸ್ವಸ್ಥಗೊಂಡಿದ್ದಾರೆ. ಸಂಜಮ್ಮ ಬೈನಿ ಮತ್ತು ಗಂಗಮ್ಮ ದೊಡ್ಡಮನಿ ಅಸ್ವಸ್ಥರಾದ ಕಾರ್ಮಿಕರು. ಸದ್ಯ ಅಸ್ವಸ್ಥರನ್ನ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv