ಹಲವು ಕಳ್ಳತನ ಕೇಸುಗಳಲ್ಲಿ ಭಾಗಿಯಾಗಿದ್ದ ಇಬ್ಬರು ಖದೀಮರ ಬಂಧನ

ಬಳ್ಳಾರಿ: ನಗರದ ಕೌಲ್ ಬಜಾರ್ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಹಲವು ಕಳ್ಳತನ ಕೇಸುಗಳಲ್ಲಿ ಭಾಗಿಯಾಗಿದ್ದ ಇಬ್ಬರು ಕಳ್ಳರನ್ನು ಬಂಧಿಸಿ ಅವರಿಂದ 8 ಲಕ್ಷದ 40 ಸಾವಿರ ರೂ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

40 ವರ್ಷ ವಯಸ್ಸಿನ ಗುಂಡೂರಾವ್ ಮಾಯಪ್ಪ ಹಾಗೂ ಜಗದೀಶ್ ಅಲಿಯಾಸ್​ ಗ್ಲೂಕೋಸ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಜೂನ್ 3ರಂದು ಈ ಇಬ್ಬರೂ ಆರೋಪಿಗಳು ಬಳ್ಳಾರಿಯ ಕೌಲ್ ಬಜಾರ್ ಸ್ಟೇಷನ್ ವ್ಯಾಪ್ತಿಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದರು. ಆ ವೇಳೆ, ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಈ ಆರೋಪಿಗಳನ್ನು ವಿಚಾರಿಸಿದಾಗ ಕಳ್ಳತನದ ಆರೋಪ ಕೇಳಿ ಬಂದಿದೆ ಅಂತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ತಿಳಿಸಿದ್ದಾರೆ. ಬಂಧಿತರಾದ ಈ ಆರೋಪಿಗಳು ಶಿಕಾರಿಪುರ ತಾಲ್ಲೂಕಿನ ಚಿಕ್ಕಸಾಲೂರು ಗ್ರಾಮದವರಾಗಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv