ಕಣಿವೆ ರಾಜ್ಯದಲ್ಲಿ ಇಬ್ಬರು ಉಗ್ರರು ಉಡೀಸ್..!

ಶೋಪಿಯಾನ್​ : ಜಮ್ಮು- ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಉಗ್ರರ ಬೇಟೆ ಮುಂದುವರಿದಿದೆ. ದಕ್ಷಿಣ ಕಾಶ್ಮೀರದ ಶೋಪಿಯಾನ್​​​ನಲ್ಲಿ ಇಬ್ಬರು ಉಗ್ರರನ್ನ ಭದ್ರತಾ ಪಡೆ ಹೊಡೆದುರುಳಿಸಿದೆ. ಕೆಲ ದಿನಗಳ ಹಿಂದಷ್ಟೇ ಮಹಿಳಾ ವಿಶೇಷ ಪೊಲೀಸ್​ ಅಧಿಕಾರಿಯೊಬ್ಬರ ಹತ್ಯೆಯಾಗಿತ್ತು. ಅವರ ಹತ್ಯೆಯಲ್ಲಿ ಈ ಇಬ್ಬರು ಉಗ್ರರ ಪಾತ್ರವಿದೆ ಎಂದು ತಿಳಿದು ಬಂದಿದೆ. ಅಲ್ಲದೇ ಕಣಿವೆ ರಾಜ್ಯದಲ್ಲಿ ನಡೆದ ಅನೇಕ ದಾಳಿಗಳಲ್ಲೂ ಹತ್ಯೆಯಾದ ಭಯೋತ್ಪಾದಕರ ಪಾತ್ರ ಇರೋದು ಕನ್ಫರ್ಮ್ ಆಗಿದೆ. ಇನ್ನೂ ಹತ್ಯೆಯಾದವರು ಜೈಷ್ ಸಂಘಟನೆಗೆ ಸೇರಿದ ಶಹಜಾನ್ ಮೀರ್ ಅಲಿಯಾಸ್ ಉಮರ್ ಖಾತಿಬ್ ಹಾಗೂ ಅಬಿದ್ ವಗಯ್ ಅಂತಾ ಗುರುತಿಸಲಾಗಿದೆ. ಉಮರ್ ಖಾತಿಬ್ ಶೋಪಿಯಾನ್​ನ ಆಸ್ಮೀಪೋರಾ ನಿವಾಸಿಯಾಗಿದ್ದು ಅಬಿದ್ ರಾವಲ್ಪೋರಾ ನಿವಾಸಿ ಅಂತ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಶೋಪಿಯಾನ್​​ನ ಗಹಂದ್ ಬಳಿ ಇಬ್ಬರನ್ನು ಎನ್​ಕೌಂಟರ್ ಮಾಡಲಾಗಿದೆ