ಕೋರ್ಟ್ ಆವರಣದಲ್ಲೇ ಎರಡು ಗುಂಪುಗಳ ಮಧ್ಯೆ ಮಾರಾಮಾರಿ..!

ತುಮಕೂರು: ಕೋರ್ಟ್‌ ಆವರಣದಲ್ಲೇ ಎರಡು ಗುಂಪುಗಳು ಪರಸ್ಪರ ಮಾರಾಮಾರಿ ಮಾಡಿಕೊಂಡ ಘಟನೆ ಗುಬ್ಬಿ ಪಟ್ಟಣದ ಕೋರ್ಟ್ ಆವರಣದಲ್ಲಿ ನಡೆದಿದೆ.
ಪರಸ್ಪರ ಬಡಿದಾಡಿಕೊಂಡಿರುವ ಇವರು ಗುಬ್ಬಿ ತಾಲೂಕಿನ ಲಿಂಗಮ್ಮನಹಳ್ಳಿ ನಿವಾಸಿಗಳು. ಗುಬ್ಬಿ ಪಟ್ಟಣದಲ್ಲಿದ್ದ ನಿವೇಶನದ ವ್ಯಾಜ್ಯವಿತ್ತು. ಈ ಕುರಿತಾಗಿ ಎರಡೂ ಕುಟುಂಬ ಕೋರ್ಟ್ ಮೆಟ್ಟಿಲೇರಿದ್ದವು. ಅಲ್ಲದೇ, ನಿವೇಶನದ ವ್ಯಾಜ್ಯ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿತ್ತು. ಇಂದು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಿ ಹೊರ ಬಂದ ವೇಳೆ ಘರ್ಷಣೆ ಉಂಟಾಗಿದೆ. ಘರ್ಷಣೆಯಲ್ಲಿ ಅಮ್ಜದ್ ಪಾಷಾ ಗುಂಪಿನ ನಾಲ್ವರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಘಟನೆಯಲ್ಲಿ ಅಲೀಂವುಲ್ಲಾ, ರಫೀಕ್ ಅಹಮದ್, ಷಫಿ ಅಹಮದ್‌ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv