IISc ಸಿಲಿಂಡರ್ ಬ್ಲಾಸ್ಟ್, ಗಾಯಗೊಂಡಿದ್ದ ವಿಜ್ಞಾನಿ ಕಾರ್ತಿಕ್ ಆರೋಗ್ಯದಲ್ಲಿ ಚೇತರಿಕೆ

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದ (IISc) ಸಿಲಿಂಡರ್ ಬ್ಲಾಸ್ಟ್ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ವೈದ್ಯರು ಮತ್ತೊಂದು ಹೆಲ್ತ್ ಬುಲೆಟಿನ್ ರಿಲೀಸ್​ ಮಾಡಿದ್ದಾರೆ.

ಡಿಸೆಂಬರ್​ 5ರಂದು ನಗರದ ಯಶವಂತಪುರ ಬಳಿ ಇರುವ ಟಾಟಾ ಇನ್ಸ್​​ಟಿಟ್ಯೂಟ್​​ನಲ್ಲಿ ಸಿಲಿಂಡರ್ ಬ್ಲಾಸ್ಟ್ ಆಗಿ ಯುವ ವಿಜ್ಞಾನಿ ಮನೋಜ್​ ಸಾವನ್ನಪ್ಪಿದ್ದರು. ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಅಲ್ಲದೇ, ಗಾಯಗೊಂಡಿದ್ದ ಮೂವರನ್ನು ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂಬಂಧ ರಾಮಯ್ಯ ಆಸ್ಪತ್ರೆ ವೈದ್ಯರು ಇಂದು ಮತ್ತೊಂದು ಹೆಲ್ತ್ ಬುಲೆಟಿನ್ ಹೊರಡಿಸಿದ್ದಾರೆ. ಇದರಲ್ಲಿ, ಗಾಯಗೊಂಡಿದ್ದ ಕಾರ್ತಿಕ್ ಹಾಗೂ ನರೇಶ್ ಚೇತರಿಕೆ ಕಂಡಿದ್ದಾರೆ. ನರೇಶ್​ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಯಾವುದೇ ಮೇಜರ್ ಸಮಸ್ಯೆಯಿಲ್ಲ. ನಡೆಯುವ ಸ್ಥಿತಿಯಲ್ಲಿದ್ದು, ಯಾವುದೇ ಗಟ್ಟಿ ಪದಾರ್ಥ ತಿನ್ನುವ ಹಾಗಿಲ್ಲ. ಅಲ್ಲದೇ, ಕಾರ್ತಿಕ್ ಸ್ಥಿತಿ ಕೂಡ ಚೇತರಿಕೆ ಕಂಡಿದ್ದು ಅವರನ್ನು ವಾರ್ಡ್ ಗೆ ಶಿಫ್ಟ್ ಮಾಡಲಿದ್ದೇವೆ ಅಂತಾ ವೈದ್ಯರು ತಿಳಿಸಿದ್ದಾರೆ.