ಕಳ್ಳತನ ಮಾಡೋದನ್ನ ನೋಡಿದ್ದಕ್ಕೆ ತಾಯಿ, ಮಗುವನ್ನ ಕೊಂದ ಕಳ್ಳರು

ಕಲಬುರಗಿ: ಮೇ 25ರಂದು ಚಿತ್ತಾಪುರದಲ್ಲಿ ನಿಶಾದೇವಿ(26) ಮತ್ತು ಆಕೆಯ ಐದು ತಿಂಗಳು ಮಗುವನ್ನು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಚಿತ್ತಾಪುರ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಇನ್ನು ವಿಚಾರಣೆ ವೇಳೆ, ಕೊಲೆಗೆ ಆರೋಪಿಗಳು ಕೊಟ್ಟ ಕಾರಣ ಕೇಳಿ, ಪೊಲೀಸರೇ ಕಂಗಾಲಾಗಿದ್ದಾರೆ.
ಮೇ 25ರಂದು ಆರೋಪಿ ದಿನೇಶ್​​ ಚೌಧರಿ (19) ಮತ್ತು ವಿಕ್ರಮ್​​ ಚೌಧರಿ (20) ಅಮೃತ್​ಪಾಲ್​ ಎಂಬವರ ಮನೆಗೆ ಕಳವು ಮಾಡಲು ಯತ್ನಿಸಿದ್ದರು.

ಈ ವೇಳೆ ಅದೇ ಕಟ್ಟಡದಲ್ಲಿ ವಾಸವಿದ್ದ ನಿಶಾದೇವಿ ಕಳ್ಳರ ಕೃತ್ಯಕ್ಕೆ ಸಾಕ್ಷಿಯಾಗಿದ್ದಳಂತೆ. ಹೀಗಾಗಿ ಯಾರ ಬಳಿಯಾದರೂ ಆಕೆ ಬಾಯಿ ಬಿಡಬಹುದು ಎನ್ನುವ ಕಾರಣಕ್ಕೆ, ಆಕೆಯ ಮನೆಗೂ ನುಗ್ಗಿದ ಆರೋಪಿಗಳು ನಿಶಾದೇವಿಯನ್ನ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಅಲ್ಲೇ ಇದ್ದ ಮಗು ಅಳುವುದನ್ನ ಸಹಿಸದೇ ಮಗುವನ್ನ ಕೂಡ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರಂತೆ. ಬಂಧಿತ ಆರೋಪಿಗಳು ರಾಜಸ್ಥಾನದವರಾಗಿದ್ದು, ಅವರಿಂದ 8 ಲಕ್ಷ 11 ಸಾವಿರ ನಗದು ಸೇರಿದಂತೆ ಮಾರಕಾಸ್ತ್ರಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv