ಆಸ್ತಿಗಾಗಿ ಅಜ್ಜನನ್ನೇ ಕೊಂದವರು ಬೇರೆ ಯಾರೂ ಅಲ್ಲ..!

ಬಾಗಲಕೋಟೆ: ಆಸ್ತಿಯ ಆಸೆಗಾಗಿ ಮೊಮ್ಮಕ್ಕಳಿಬ್ಬರು ತನ್ನ ಅಜ್ಜನನ್ನೇ ಕೊಲೆ ಮಾಡಿರುವ ಘಟನೆ ಬದಾಮಿ ತಾಲ್ಲೂಕಿನ ನೀರಲಕೇರಿ ಗ್ರಾಮದಲ್ಲಿ ನಡೆದಿದೆ. ಮೃತ ಯಲ್ಲಪ್ಪ ಪಟಾತ್ (85), ತನ್ನ ಪಾಲಿನ ಆಸ್ತಿಯನ್ನು ತನ್ನ ಮಗಳಿಗೆ ಬರೆದುಕೊಡೋಕೆ ಮುಂದಾಗಿದ್ದರು. ಆದ್ರೆ ಮೊಮ್ಮಕ್ಕಳಾದ ಬೀರಪ್ಪ ಪಟಾತ್, ಸೋಮವ್ವ ಕೋರಕೊಪ್ಪ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಯಲ್ಲಪ್ಪ ಮೊಮ್ಮಕ್ಕಳ ಮಾತಿಗೆ ಮಣಿಯದೆ ಆಸ್ತಿಯನ್ನು ಮಗಳ ಹೆಸರಿಗೆ ಬರೆಯಲು ಮುಂದಾದಾಗ ಜೂನ್ 17 ರಂದು ಮರ್ಮಾಂಗ ಹಿಸುಕಿ ಕೊಲೆಗೈದಿದ್ದರು. ನಂತರ ಇವರೇ ಧಾರ್ಮಿಕ ವಿಧಿವಿಧಾನಕ್ಕೆ ಮುಂದಾಗಿದ್ದರು. ಸಂಶಯದ‌ ಮೇಲೆ ಮೊಮ್ಮಕ್ಕಳನ್ನು ವಶಕ್ಕೆ ಪಡೆದ ಕೆರೂರು ಠಾಣೆ ಪೊಲೀಸರು, ವಿಚಾರಣೆ ನಡೆಸಿದಾಗ ಆರೋಪಿಗಳು ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.

ನಿಮ್ಮ ಸಲಹೆ,ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv