ಶಾಹಿದ್​ ಆಫ್ರಿದಿಗೆ ಬುದ್ಧಿ ಹೇಳಿದ್ದು ಯಾರು..?

ಪಾಕ್​ ಕ್ರಿಕೆಟರ್​ ಶಾಹಿದ್​ ಆಫ್ರಿದಿಗೂ ವಿವಾದಗಳಿಗೂ ಏನೋ ಒಂದು ರೀತಿ ನಂಟು. ಸದಾ ಒಂದಿಲ್ಲ ಒಂದು ವಿವಾದಗಳಲ್ಲಿ ಸಿಕ್ಕಿಕೊಳ್ಳೋ ಆಫ್ರಿದಿ, ಇತ್ತೀಚೆಗೆ ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿ ಛೀಮಾರಿ ಹಾಕಿಸಿಕೊಂಡಿದ್ರು. ಈಗ ಸಿಂಹದ ಜೊತೆ ಮಗಳ ಚಿತ್ರವನ್ನು ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿರುವ ಪಾಕ್​ ಕ್ರಿಕೆಟರ್, ಅಭಿಮಾನಿಗಳಿಂದ ಬುದ್ಧಿ ಹೇಳಿಸಿಕೊಂಡಿದ್ದಾರೆ.​​

 

ಅಷ್ಟಕ್ಕೂ ಆಫ್ರಿದಿ ಹೊಸ ಕಾಂಟ್ರವರ್ಸಿಯಲ್ಲಿ ತಗಲಾಕೊಳ್ಳೋದಕ್ಕೆ ಕಾರಣವಾಗಿರೋದು ಟ್ವಿಟರ್​​ ಪೋಸ್ಟ್​​. ಆಫ್ರಿದಿ ಪೋಸ್ಟ್​ ಮಾಡಿರುವ ಫೋಟೋ ಒಂದರಲ್ಲಿ ಜಿಂಕೆ ಮರಿಗೆ ಬಟಲ್​ನಲ್ಲಿ ಹಾಲು ಕುಡಿಸುತ್ತಿದ್ದಾರೆ. ಮತ್ತೊಂದು ಪೋಟೋದಲ್ಲಿ ಆಫ್ರಿದಿ ಮಗಳು ಮಲಗಿರುವ ಸಿಂಹದ ಎದುರು ನಿಂತಿದ್ದಾಳೆ ಈ ಎರಡು ಫೋಟೋಗಳನ್ನು ಪೋಸ್ಟ್​ ಮಾಡಿರುವ ಪಾಕ್ ಕ್ರಿಕೆಟರ್​​ ಟ್ವೀಟ್​ಗೆ, ಅಭಿಮಾನಿಗಳು ರೀ ಟ್ವೀಟ್ ಮೂಲಕ ಬುದ್ಧಿ ಹೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv