ಟ್ವಿಟರ್​ನಲ್ಲಿ ‘ಲೋಕ ಕದನ’ದ್ದೇ ಚರ್ಚೆ..!

ದೆಹಲಿ: ಎಲೆಕ್ಷನ್​ನ ಕಾವು ಕೇವಲ ಆಯಾ ಕ್ಷೇತ್ರಗಳಲ್ಲಿ ಮಾತ್ರವಲ್ಲ, ಸಾಮಾಜಿಕ ಜಾಲತಾಣದಲ್ಲೂ ಹೆಚ್ಚಾಗಿದೆ. ಅದರಲ್ಲೂ ಟ್ವಿಟರ್​ನಲ್ಲಿ ಚುನಾವಣೆಗೆ ಸಂಬಂಧಿಸಿದ ಪೋಸ್ಟ್​ಗಳು, ವಾದ ವಿವಾದಗಳೂ ಭರ್ಜರಿಯಾಗಿ ಹರಿದಾಡ್ತಿವೆ.
ಇನ್ನು, ನಿನ್ನೆ ದೇಶಾದ್ಯಂತ ಮೊದಲ ಹಂತದ ಚುನಾವಣೆ ನಡೆದಿದ್ದು, ಟ್ವಿಟರ್​​ನಲ್ಲಿ ಅತೀ ಹೆಚ್ಚು ಇದೇ ವಿಚಾರ ಚರ್ಚೆಯಾಗಿದೆ. ನಿನ್ನೆ 18 ರಾಜ್ಯಗಳು ಹಾಗೂ 2 ಕೇಂದ್ರಾಡಳತ ಪ್ರದೇಶಗಳ 91 ಕ್ಷೇತ್ರಗಳಲ್ಲಿ ಹಂತದ ಚುನಾವಣೆ ನಡೆದಿದೆ. ಈ ಎಲೆಕ್ಷನ್​ ಕುರಿತಾಗಿ ನಿನ್ನೆ ಒಂದೇ ದಿನ ಬರೋಬ್ಬರಿ 1.2 ಮಿಲಿಯನ್​ ಟ್ವೀಟ್ ಅಂದ್ರೆ, 12 ಲಕ್ಷ ಟ್ವೀಟ್​ಗಳನ್ನ ಮಾಡಲಾಗಿದೆ ಎಂದು ಟ್ವೀಟ್​ ಬಝ್​ ತಿಳಿಸಿದೆ. ಮಾರ್ಚ್​ 11ರಂದು ಎಲೆಕ್ಷನ್​ ಡೇಟ್​ ಅನೌನ್ಸ್​ ಆದ ದಿನದಿಂದ ಈವರೆಗೂ ಸುಮಾರು 45.6 ಮಿಲಿಯನ್​ ಅಂದ್ರೆ, 4 ಕೋಟಿ 56 ಲಕ್ಷ ಟ್ವಿಟರ್​ ಕಾನ್ವರ್ಸೇಷನ್​ ಆಗಿವೆ.
ಚುನಾವಣಾ ಱಲಿ, ಪ್ರಣಾಳಿಕೆ ಹಾಗೂ ಇನ್ನಿತರೆ ಘೋಷಣೆ ಬಗ್ಗೆ ಹೆಚ್ಚು ಚರ್ಚೆ ನಡೆದಿದೆಯಂತೆ. ಅದ್ರಲ್ಲೂ ರಾಷ್ಟ್ರೀಯ ಭದ್ರತೆ, ಧರ್ಮ, ಉದ್ಯೋಗ, ಕೃಷಿ, ತೆರಿಗೆ ಮತ್ತು ವ್ಯಾಪಾರ ಕುರಿತಾಗಿ ಅತೀ ಹೆಚ್ಚು ಸಂವಾದ ನಡೆದಿದೆ. ಇದರಲ್ಲಿ ಪ್ರಮುಖವಾಗಿ ಪ್ರಧಾನಿ ಮೋದಿಯೇ ಅತೀ ಹೆಚ್ಚು ಚರ್ಚಾ ವಸ್ತು ಆಗಿದ್ದಾರೆ. ಇನ್ನುಳಿದಂತೆ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್​ ಶಾ, ಯುಪಿ ಸಿಎಂ ಯೋಗಿ ಆದಿತ್ಯನಾಥ್​, ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ನಂತರದ ಸ್ಥಾನಗಳಲ್ಲಿದ್ದಾರೆ. ಚುನಾವಣಾ ಹಂತ, ಚುನಾವಣೆ ಬಳಿಕ ಭಾರತ ಇತ್ಯಾದಿ ಕುರಿತು ಟ್ವೀಟ್​, ರಿಟ್ವೀಟ್​, ಹ್ಯಾಶ್​ಟ್ಯಾಗ್​, ರಿಪ್ಲೈಗಳ ಸಾಗರವೇ ಟ್ವಿಟರ್​ನಲ್ಲಿ ಹರೀತಿದೆ ಎಂದು ಟ್ವಿಟರ್​ ವರದಿ ಹೇಳಿದೆ.