ಶ್ರೀಲಂಕಾ ಸರಣಿ ಸ್ಫೋಟ: 50ಕ್ಕೂ ಹೆಚ್ಚು ಸಾವು, 200ಕ್ಕೂ ಹೆಚ್ಚು ಜನರಿಗೆ ಗಾಯ..!

ಕೋಲಂಬೊ, ಶ್ರೀಲಂಕಾ: ಇಂದು ಬೆಳಗಿನ ಜಾವ ಶ್ರೀಲಂಕಾದಲ್ಲಿ ನಡೆದ ಸರಣಿ ಸ್ಫೋಟದಲ್ಲಿ 50ಕ್ಕೂ ಹೆಚ್ಚು ಜನರು ದಾರುಣ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೋಲಂಬೊದ ಕೊಚಿಕಡೆ ಪ್ರದೇಶದಲ್ಲಿರೋ ಸೇಂಟ್ ಆಂಟೊನಿ ಚರ್ಚ್ ಹಾಗೂ ಕಟುವಾಪಿಟಿಯಾ ಮತ್ತು ಕಟಾನಾದಲ್ಲಿನ ಎರಡು ಚರ್ಚ್​​ಗಳಲ್ಲಿ ಬಾಂಬ್ ಸ್ಫೋಟಿಸಿದೆ. ಅಲ್ಲದೇ ಕೋಲಂಬೋದ ಶಾಂಗ್ರಿ-ಲಾ ಹಾಗೂ ಕಿಂಗ್ಸ್​​ಬರಿ ​ಫೈವ್​ಸ್ಟಾರ್​ ಹೋಟೆಲ್​​ಗಳಲ್ಲಿ ಕೂಡ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸ್​​​ ವಕ್ತಾರ ರುವಾನ್ ಗುಣಶೇಖರ್ ತಿಳಿಸಿದ್ದಾರೆ. ಸದ್ಯದ ವರದಿಯಂತೆ ಮೂರು ಚರ್ಚ್ ಹಾಗೂ ಮೂರು ಫೈವ್ ಸ್ಟಾರ್ ಹೋಟೆಲ್​ಗಳಲ್ಲಿ ಈ ಸ್ಫೋಟಗಳು ಸಂಭವಿಸಿವೆ ಎಂದು ತಿಳಿದು ಬಂದಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv