ಟಿವಿಯಲ್ಲಿ ಉಂಟಾದ ಶಾರ್ಟ್​ ಸರ್ಕ್ಯೂಟ್​ಗೆ ಯುವತಿ ಸಾವು..!​

ಕೊಪ್ಪಳ: ಟಿವಿ ಆನ್ ಮಾಡಲು ಹೋಗಿ ಕರೆಂಟ್ ಶಾಕ್​ ಹೊಡೆದು ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಕೊಪ್ಪಳ ತಾಲೂಕಿನ ಚಾಮಲಾಪುರ ಗ್ರಾಮದಲ್ಲಿ ನಡೆದಿದೆ. ಮೃತಳನ್ನು ಚಾಮಲಾಪುರ ಗ್ರಾಮದ ನಿವಾಸಿ ವಿಶಾಲಾಕ್ಷಿ (16) ಎಂದು ಗುರುತಿಸಲಾಗಿದೆ. ಟಿವಿ ಆನ್​ ಮಾಡಲು ಹೋದಾಗ ಟಿವಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಟಿವಿ ಸಮೇತ ಬಾಲಕಿಯೂ ಸಂಪೂರ್ಣ ಸುಟ್ಟು ಕರಕಲಾಗಿದ್ದಾಳೆ. ಇನ್ನು ಘಟನೆಯಿಂದ ಕಂಗಾಲಾಗಿದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಕೊಪ್ಪಳ ಗ್ರಾಮೀಣಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿರುವುದು ತಿಳಿದು ಬಂದಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv