ತುಂಗಭದ್ರಾ ನದಿ ನೀರಿನ ಹರಿವಿನಲ್ಲಿ ಇಳಿಮುಖ: ಮಂತ್ರಾಲಯದ ಭಕ್ತರು ನಿರಾಳ

ರಾಯಚೂರು: ತುಂಗಭದ್ರಾ ನದಿ ನೀರಿನ ಹರಿವಿನಲ್ಲಿ ಇಳಿಮುಖವಾದ ಹಿನ್ನೆಲೆಯಲ್ಲಿ ಮಂತ್ರಾಲಯದ ಭಕ್ತರು ನಿರಾಳರಾಗಿದ್ದಾರೆ. ಟಿಬಿ ಡ್ಯಾಂ ನಿಂದ 2 ಲಕ್ಷದ 20 ಸಾವಿರ ಕ್ಯೂಸೆಕ್​ ನೀರು ನದಿಗೆ ಬಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ನಾನಕ್ಕೆ ನದಿಗೆ ಇಳಿಯದಂತೆ ಭಕ್ತರಿಗೆ ಎಚ್ಚರಿಕೆ ನೀಡಲಾಗಿತ್ತು. ಆದ್ರೆ ಇಂದು 1 ಲಕ್ಷದ 60 ಸಾವಿರ ಕ್ಯೂಸೆಕ್​ ನೀರು ಬೀಡಲಾಗಿದೆ. ಇದ್ರಿಂದ ನದಿಯಲ್ಲಿ ನೀರಿನ ಪ್ರಮಾಣ ಕುಗ್ಗಿದ್ದು ಎಂದಿನಂತೆ ಮಂತ್ರಾಲಯಕ್ಕೆ ಬರುವ ಭಕ್ತರು ನದಿಯಲ್ಲಿ ಸ್ನಾನ ಮಾಡುತ್ತಿದ್ದಾರೆ. ಇನ್ನು ಸ್ನಾನ ಘಟ್ಟದಲ್ಲಿ ಪೊಲೀಸ್, ಹೊಂ ಗಾರ್ಡ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಭಕ್ತರು ಸಂಪೂರ್ಣವಾಗಿ ನದಿಗೆ ಇಳಿಯದಂತೆ ನೋಡಿಕೊಳ್ಳಲಾಗುತ್ತಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv