ಚೆನ್ನೈ ವೈದ್ಯರ ತಂಡದಿಂದ ಸಿದ್ದಗಂಗಾ ಶ್ರೀಗಳ ಆರೋಗ್ಯ ತಪಾಸಣೆ

ತುಮಕೂರು: ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಆರೋಗ್ಯ ಸ್ಥಿರವಾಗಿದೆ. ಶ್ರೀಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠಕ್ಕೆ ಚೆನ್ನೈನಿಂದ ವೈದ್ಯರ ತಂಡ ಆಗಮಿಸಿದೆ.

ನುರಿತ ಅರಿವಳಿಕೆ ತಜ್ಞ ಎಲ್.ಎನ್. ಕುಮಾರ್ ನೇತೃತ್ವದ ವೈದ್ಯರ ತಂಡ ಶ್ರೀಗಳ ಆರೋಗ್ಯ ತಪಾಸಣೆ ಮಾಡುತ್ತಿದೆ. ತಪಾಸಣೆ ಮುಗಿದ ಬಳಿಕ ಶ್ರೀಗಳ ಹೆಚ್ಚಿನ ಚಿಕಿತ್ಸೆ ಬಗ್ಗೆ ವೈದ್ಯಾಧಿಕಾರಿಗಳು ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆಎನ್ನಲಾಗಿದೆ. ಸಿದ್ದಗಂಗಾ ಶ್ರೀಗಳಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯ ಇರುವುದರಿಂದ ಚೆನ್ನೈಗೆ ಶಿಫ್ಟ್​​ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದ್ದು,  ಮಠದ ಆವರಣದಲ್ಲಿ ಐಸಿಯು ಆ್ಯಂಬುಲೆನ್ಸ್​​ ಬಂದು ನಿಂತಿದೆ.