ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಸಿದ್ದಗಂಗಾ ಶ್ರೀ, ಮಠದತ್ತ

ಬೆಂಗಳೂರು: ನಡೆದಾಡುವ ದೇವರು, ಶತಾಯುಷಿ ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಯವರ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಬಿಜಿಎಸ್ ಆಸ್ಪತ್ರೆಗೆ ಆಗಮಿಸಿದ್ದರು. ಶ್ರೀಗಳಿಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮುಗಿದಿದ್ದು ಡಿಸ್ಚಾರ್ಜ್​ ಆಗಿದ್ದಾರೆ. ಈ ಹಿಂದೆ ಅವರಿಗೆ ಅಳವಡಿಸಲಾಗಿದ್ದ ಸ್ಟೆಂಟ್,​ ಬ್ಲಾಕ್​ ಆಗಿದ್ದಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಯ ಮೂಲಕ ಬ್ಲಾಕ್​ ಕ್ಲೀನ್​ ಮಾಡಲಾಗಿದ್ದು, ಸಿದ್ದಗಂಗಾ ಶ್ರೀಗಳು ಆಸ್ಪತ್ರೆಯಿಂದ ಮಠದತ್ತ ಹೊರಟಿದ್ದಾರೆ.  ಜನರಲ್‌ ಚೆಕಪ್‌ ಮುಗಿಸಿ ಮಠಕ್ಕೆ ವಾಪಸ್ಸಾಗಿದ್ದಾರೆ, ವರಿ ಮಾಡುವಂಥಾದ್ದೇನಿಲ್ಲ ಅಂತಾ ವೈದ್ಯರು ತಿಳಿಸಿದ್ದಾರೆ.