ಸಿನಿಮೀಯ ರೀತಿಯಲ್ಲಿ ಶಂಕಿತ ಕಳ್ಳರು ಎಸ್ಕೇಪ್​..!

ತುಮಕೂರು: ಸಿನಿಮೀಯ ರೀತಿಯಲ್ಲಿ ಮೋರಿ ಒಳಗೆ ನುಸುಳಿ ಕಳ್ಳರು ಪರಾರಿಯಾದ ಘಟನೆ ನಗರದ ಅಮಾನಿಕೆರೆ ಬಳಿ ನಡೆದಿದೆ. ಕಳ್ಳತನ ಪ್ರಕರಣದಲ್ಲಿ ಶಂಕಿತರನ್ನ ಹಿಡಿಯಲು ತಿಲಕ್ ಪಾರ್ಕ್ ಕ್ರೈಂ ಬ್ರಾಂಚ್ ಪೊಲೀಸರು ಬಂದಿದ್ದರು. ಆಗ ಪೊಲೀಸರನ್ನು ಕಂಡ ಕೂಡಲೇ ಮೂವರು ಕಳ್ಳರು ದೊಡ್ಡ ಮೋರಿಯೊಳಗೆ‌ ನುಸುಳಿ ಪರಾರಿಯಾಗುತ್ತಿದ್ದರು. ತಕ್ಷಣ ಎಚ್ಚೆತ್ತ ಪೊಲೀಸರು ಮೂವರು ಶಂಕಿತರಲ್ಲಿ ಒಬ್ಬನನ್ನ ವಶಕ್ಕೆ ಪಡೆದಿದ್ದಾರೆ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಮೋರಿಯಿಂದ ಎಸ್ಕೇಪ್‌ ಆದ ಇಬ್ಬರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv