ಕುಂಚವೂ ಕೇಳುತ್ತಿದೆ #justiceformadhu ಅಂತಾ

ರಾಯಚೂರು: ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ತುಮಕೂರಿನ ಕಲಾವಿದ, ವಿಶಿಷ್ಟ ರೀತಿಯಲ್ಲಿ ಮೃತ ವಿದ್ಯಾರ್ಥಿನಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಕುಂಚ ಕಲಾವಿದ ತುಮಕೂರಿನ ಪರಮೇಶ್ ಗುಬ್ಬಿ, ಮೃತ ವಿದ್ಯಾರ್ಥಿನಿಯ ಚಿತ್ರ ಬಿಡಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ವಿದ್ಯಾರ್ಥಿನಿ ಅಸಹಜ ಸಾವಿನ ನ್ಯಾಯಕ್ಕಾಗಿ ಆಗ್ರಹಿಸಿ ದೇಶದೆಲ್ಲೆಡೆ ಕೂಗು ಜೋರಾಗಿದೆ. ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳು ಭಾಗಿಯಾಗಿದ್ದಾರಾ ಅನ್ನೋದು ಬೆಳಕಿಗೆ ಬರಬೇಕು. ಈ ರೀತಿಯ ಘಟನೆಗಳು ಮರುಕಳಿಸದಂತೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಅಂತ ಕಲಾವಿದ ಪರಮೇಶ್ ಆಗ್ರಹಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv