ಆಗುಂಬೆ ಘಾಟಿಯಲ್ಲಿ ಟಿಟಿ ಬ್ರೇಕ್ ಫೇಲ್.. ಸಾರ್ವಜನಿಕರಿಗೆ ಶಾಕ್..!

ಉಡುಪಿ: ಬ್ರೇಕ್ ಫೇಲ್ ಆದ ಟೆಂಪೋ ಟ್ರಾವೆಲರ್​ವೊಂದು ಚೆಕ್​ಪೋಸ್ಟ್​ನ ಮೂರು ಬ್ಯಾರಿಕೇಡ್​ಗಳಿಗೆ ಗುದ್ದಿ, ಅವಾಂತರ ಸೃಷ್ಟಿಸಿದೆ. ಹೆಬ್ರಿ ತಾಲೂಕಿನ ಸೋಮೇಶ್ವರದ ಚೆಕ್​ಪೋಸ್ಟ್​ನಲ್ಲಿ ಈ ಘಟನೆ ನಡೆದಿದೆ. ಪೊಲೀಸ್​ ಸಿಬ್ಬಂದಿ ಹಾಗೂ ಬಿಎಸ್‍ಎಫ್, ಸಿಆರ್​ಪಿಎಫ್ ಯೋಧರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ನಿನ್ನೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ನಡೆದ ಘಟನೆಯಲ್ಲಿ, ಇದ್ದಕ್ಕಿದ್ದಂತೆ ನುಗ್ಗಿದ ಟಿಟಿ, ಎದುರಿಗಿದ್ದ ಮೂರು ಬ್ಯಾರಿಕೇಡ್​ಗಳಿಗೆ ಡಿಕ್ಕಿ ಹೊಡೆದಿದೆ. ಹಾಸನ ಮೂಲದ ಪ್ರವಾಸಿಗರು ಟಿಟಿಯಲ್ಲಿ ಆಗುಂಬೆ ಘಾಟಿಯಿಂದ ಇಳಿದು ಧರ್ಮಸ್ಥಳಕ್ಕೆ ಹೋಗುತ್ತಿದ್ದರು. ಈ ವೇಳೆ ಸೋಮೇಶ್ವರ ಚೆಕ್​ಪೋಸ್ಟ್​ ಬಳಿ ಇಳಿಜಾರಿನಲ್ಲಿ, ಸ್ಪೀಡ್​ ಕಂಟ್ರೋಲ್​ ಸಿಗದೇ ವಾಹನ ಬ್ರೇಕ್​ ಫೇಲ್​ ಆಗಿದೆ ಎನ್ನಲಾಗಿದೆ. ಎಷ್ಟೇ ಪ್ರಯತ್ನ ಪಟ್ಟರೂ ವಾಹನ ಹತೋಟಿಗೆ ಬರದೇ ವಾಹನ ಚೆಕ್​ಪೋಸ್ಟ್​ ಬಳಿ ಹಾಕಲಾಗಿದ್ದ ಬ್ಯಾರಿಕೇಡ್​ಗೆ ಗುದ್ದಿದೆ. ಅಲ್ಲದೇ ಅಲ್ಲಿಂದ ನೂರು ಮೀಟರ್ ದೂರ ಹೋಗಿ ನಿಂತಿದೆ. ಈ ನಡುವೆ, ಡ್ರೈವರ್​​ನ ಸಮಯ್ರಜ್ಞೆ ಹಾಗೂ ಡ್ರೈವಿಂಗ್ ಸ್ಕಿಲ್​ನಿಂದಾಗಿ ತಪಾಸಣೆ ನಡೆಸುತ್ತಿದ್ದ ಭದ್ರತಾ ಸಿಬ್ಬಂದಿಗಾಗಲಿ, ನಿಂತಿದ್ದ ವಾಹನಗಳಿಗಾಗಲಿ ಯಾವುದೇ ಹಾನಿಯಾಗಿಲ್ಲ.