ಈ ಟಿಪ್ಸ್​ ಫಾಲೋ ಮಾಡಿ, ಮಧ್ಯಾಹ್ನ ಊಟದ ನಂತರ ನಿದ್ದೆಗೆ ಗುಡ್​ ಬೈ​​ ಹೇಳಿ

ಮಧ್ಯಾಹ್ನ ಊಟ ಮುಗಿಸಿದ ನಂತರ ತೂಕಡಿಕೆ ಬರುತ್ತದೆ ಎಂದು ಕೆಲವರು ಕೊರಗುತ್ತಾರೆ. ಇದು ಕೆಲವೊಬ್ಬರ ಸಮಸ್ಯೆ ಮಾತ್ರವಲ್ಲ. ಸಾಮಾನ್ಯವಾಗಿ ಮಧ್ಯಾಹ್ನ ಊಟ ಮುಗಿದ ನಂತರ ನಿದ್ದೆ ಆವರಿಸಿಕೊಂಡಂತೆ ಅನಿಸುತ್ತದೆ. ಈ ರೀತಿಯ ಎಲ್ಲಾ ಲಕ್ಷಣಗಳು ಭರ್ಜರಿ ಊಟ ಮಾಡಿದ ನಂತರ ಕಾಣಿಸಿಕೊಳ್ಳುತ್ತವೆ. ಮಧ್ಯಾಹ್ನ ಊಟ ಮಾಡಿದ ನಂತರ ಜೀರ್ಣಕ್ರಿಯೆ ವೇಳೆ ಕೆಲವೊಂದು ಆರೋಗ್ಯದ ಸಮಸ್ಯೆಯಿಂದ ನಿದ್ದೆ ಆವರಿಸಿಕೊಳ್ಳುತ್ತದೆ. ಮಧ್ಯಾಹ್ನ ಊಟ ನಂತರ ಕೆಲಸದ ಬಗ್ಗೆ ನಿರ್ಲಕ್ಷ್ಯ ಬಂದು ನಿದ್ದೆಗೆ ಜಾರುವಂತೆ ಆಗುತ್ತದೆ. ನಿದ್ದೆ ಬರದಂತೆ ಮಾಡೋದು ಹೇಗೆ? ಅದಕ್ಕೆ ಇಲ್ಲಿವೆ ಟಿಪ್ಸ್​;

ರಾತ್ರಿ ವೇಳೆ ಸರಿಯಾಗಿ ನಿದ್ದೆ ಮಾಡಿ

ನಿಮ್ಮ ದೇಹಕ್ಕೆ ಪ್ರತಿದಿನವೂ ಸರಿಯಾದ ಪ್ರಮಾಣದ ನಿದ್ದೆ ಅವಶ್ಯಕತೆಯಿದೆ. ಏಳರಿಂದ 8 ಗಂಟೆ ಕಾಲ ರಾತ್ರಿ ನಿದ್ದೆ ದೇಹಕ್ಕೆ ಬೇಕಾಗುತ್ತದೆ. ಪ್ರತಿನಿತ್ಯ ಮಲಗುವ ಮತ್ತು ಎದ್ದೇಳುವ ಸಮಯವನ್ನು ನಿಗದಿ ಮಾಡಿ. ಇದನ್ನೇ ದಿನನಿತ್ಯ ಪಾಲಿಸಿ, ಮಧ್ಯಾಹದ ವೇಳೆ ಸ್ವಲ್ಪ ನಡೆದು ವ್ಯಾಯಾಮ ಮಾಡಿ. ತಿನ್ನುವ ಆಹಾರದಲ್ಲಿ ಸಕ್ಕರೆ ಪ್ರಮಾಣ ಪರೀಕ್ಷಿಸಿ. ನೀವು ಮಧ್ಯಾಹ್ನ ಸೇವಿಸುವ ಆಹಾರದಲ್ಲಿ ಸಕ್ಕರೆ ಮತ್ತು ಕೊಬ್ಬಿನ ಅಂಶಗಳನ್ನು ಅವಾಯ್ಡ್​ ಮಾಡಿ. ಸಕ್ಕರೆ ಪ್ರಮಾಣ ನಿಮ್ಮ ಎನರ್ಜಿಯನ್ನು ಕಡಿಮೆಗೊಳಿಸುತ್ತದೆ. ಬದಲಾಗಿ ಮಧ್ಯಾಹ್ನದ ವೇಳೆ ಹಣ್ಣು ಹಂಪಲು ಸೇವಿಸುವುದು ಸೂಕ್ತ.

ಐರನ್​​ ಅಂಶವುಳ್ಳ ಆಹಾರ ಹೆಚ್ಚು ಸೇವಿಸಿ

ಮಧ್ಯಾಹ್ನ ಸೇವಿಸುವ ಆಹಾರದಲ್ಲಿ ಐರನ್, ಪ್ರೋಟೀನ್​ ಹಾಗೂ ಕಾಂಪ್ಲೆಕ್ಸ್​ ಕಾರ್ಬೋಹೈಡ್ರೇಟ್ಸ್​​ ಹೇರಳವಾಗಿರುವ ಆಹಾರ ಸೇವಿಸಿ. ಐರನ್ ಹಿಮೋಗ್ಲೋಬಿನ್​​ ಪ್ರಮಾಣ ಹೆಚ್ಚಿಸುವಲ್ಲಿ ಸಹಾಯಕವಾಗುತ್ತವೆ. ಕಾರ್ಬೋಹೈಡ್ರೇಟ್ಸ್​ ದೇಹದ ವಿವಿಧ ಭಾಗಗಳಿಗೆ ಗ್ಲೂಕೋಸ್​​​ ಪೂರೈಸುತ್ತದೆ. ಹೆಚ್ಚು ಪೋಷಕಾಂಶವುಳ್ಳ ಆಹಾರ ಸೇವಿಸೋದ್ರಿಂದ ಮಧ್ಯಾಹ್ನ ನಿದ್ರೆ ಬರುವುದನ್ನ ತಡೆಯಬಹುದು.

ಹೆಚ್ಚು ತಿನ್ನುವುದು ಆರೋಗ್ಯಕ್ಕೆ ಹಾನಿಕರ
ಮಧ್ಯಾಹ್ನದ ಹೊತ್ತು ಯಾವುದೇ ಕಾರಣಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವಿಸಬೇಡಿ. ಹೆಚ್ಚು ಊಟ ಮಾಡೋದ್ರಿಂದ ಅದರ ಜೀರ್ಣಕ್ರಿಯೆಗೆ ದೇಹ ಹೆಚ್ಚಿನ ಎನರ್ಜಿ ಬಳಸಿಕೊಳ್ಳಬೇಕಾಗುತ್ತದೆ. ಇದರಿಂದ ನಿಮಗೆ ಸುಸ್ತಾದಂತೆ ಅನಿಸುತ್ತದೆ. ಹೀಗಾಗಿ ಮಧ್ಯಾಹ್ನದ ಊಟ ಮಿತವಾಗಿರಲಿ. ಸಂಜೆ ಸ್ನಾಕ್ಸ್​​ ತಿನ್ನಿ.

ವಾಕಿಂಗ್ ಇರಲಿ
ಊಟ ಮಾಡಿದ ತಕ್ಷಣವೇ ನಡೆಯಲು ಶುರು ಮಾಡಬೇಡಿ. ಆಫೀಸ್​ಗೆ ಕೆಲಸಕ್ಕೆ ಮರಳುವ 10 ರಿಂದ 15 ನಿಮಿಷ ಮೊದಲು ಸ್ವಲ್ಪ ವಾಕ್ ಮಾಡಿ. ಇದರಿಂದ ನಿಮ್ಮ ದೇಹದಲ್ಲಿ ಆಕ್ಸಿಜನ್​ ಪ್ರಮಾಣ ಹೆಚ್ಚಾಗಿ ನಿಮ್ಮ ದೇಹದ ಎನರ್ಜಿ ಹೆಚ್ಚಿಸುತ್ತದೆ.