ನಿಮ್ಮ ಮಡಿಲಲ್ಲೂ ಮಗು ನಗಬೇಕೇ..? ಈ ಸ್ಟೋರಿ ಓದಿ..!

ಇತ್ತೀಚೆಗೆ ಮಾಡರ್ನ್​ ಕಪಲ್ಸ್​ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಸಮಸ್ಯೆ ಬಂಜೆತನ. ಇದು ಪರುಷರು, ಮಹಿಳೆಯರು ಇಬ್ಬರನ್ನೂ ಗಂಭೀರವಾಗಿ ಕಾಡುವ ಸಮಸ್ಯೆ. ಒತ್ತಡದ ಜೀವನ, ಡಯಟ್​ಗೆ ಅಟ್ಟೆನ್ಶನ್​ ಕೊಡದೇ, ಸರಿಯಾಗಿ ನಿದ್ದೆ, ವ್ಯಾಯಾಮ ಮಾಡದೇ ಇರುವುದೇ ಈ ಸಮಸ್ಯೆಗೆ ಮೇಜರ್​ ಕಾರಣ. ಕೆಲವರು ಮದುವೆಯಾದ ದಿನದಿಂದಲೇ, ಮಗು ಬೇಡ ಅಂತಾ ಮಧ್ಯವಯಸ್ಸಿನಲ್ಲೇ ಹಲವಾರು ಬಾರಿ ಗರ್ಭಪಾತ ಮಾಡಿಕೊಳ್ಳುತ್ತಾರೆ. ಇದ್ರಿಂದ ಬಂಜೆತನ ಅವರಲ್ಲಿ ಜೀವನ ಪರ್ಯಂತ ಹಾಗೆ ಉಳಿಯುತ್ತೆ.


ಬಂಜೆತನಕ್ಕೆ ಇಲ್ಲಿದೆ ಪರಿಹಾರ..!
ಎಷ್ಟೇ ಟ್ರೀಟ್​ಮೆಂಟ್​ ತೆಗೆದುಕೊಂಡರೂ, ಎಲ್ಲಾ ದೇವರ ಮೊರೆ ಹೋದ್ರೂ, ಕೊನೆಗೆ ನಿರಾಸೆಯಿಂದ ಮಕ್ಕಳಾಗೋದು ಕನಸಿನ ಮಾತು ಅಂತ ಎಷ್ಟೋ ಜನ ನೊಂದುಕೊಂಡೇ ಇದ್ದಾರೆ. ಹಾಗಂತ ಇದಕ್ಕೆ ಪರಿಹಾರ ಇಲ್ಲ ಅಂತಿಲ್ಲ, ಖಂಡಿತ ಇದೆ. ಬಂಜೆತನ ನಿವಾರಣೆ ಮಾಡ್ಬೇಕು ಅಂತಾ ಎಷ್ಟೋ ಸಂಶೋಧಕರು ರಿಸರ್ಚ್​ ನಡೆಸಿದ್ದಾರೆ. ಇದೀಗ ಎಂಡೋಕ್ರೈನ್​ ಸೊಸೈಟಿ ಎಂಬ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಸೀಫುಡ್​ ಡಯಟ್​ ಮಾಡೋದ್ರಿಂದ, ಪುರುಷರಲ್ಲಿ ವೀರ್ಯಾಣು ಹಾಗೂ ಮಹಿಳೆಯರಲ್ಲಿ ಅಂಡಾಣು ಉತ್ಪತ್ತಿ ಜಾಸ್ತಿಯಾಗೋದರ ಜೊತೆಗೆ, ನೀವೂ ಬಹು ಬೇಗನೇ ಕನ್ಸೀವ್​ ಆಗುತ್ತೀರಾ ಅನ್ನುವ ಸತ್ಯಾಂಶವನ್ನು ಕಂಡುಹಿಡಿದಿದ್ದಾರೆ.


ಸೀಫುಡ್​ ಡಯಟ್ ಉಪಯೋಗಳೇನು..?
ಕನ್ಸೀವ್​ ಆಗುವ ಮಹಿಳೆಯರಿಗೆ ಪ್ರೊಟೀನ್​ ಮತ್ತು ಇತರೆ ನ್ಯೂಟ್ರೀಶಿಯನ್​ಆಹಾರಗಳಲ್ಲಿ ಸೀ ಫುಡ್​ ಕೂಡಾ ಒಂದು. ಕೆಲವು ಮಹಿಳೆಯರು ಪಾದರಸ ಕಂಟೆಂಟ್​ ಇರುವಂತಹ ಮೀನುಗಳನ್ನು ಅವಾಯ್ಡ್​ ಮಾಡುತ್ತಾರೆ. ಮೀನು ನಿಮ್ಮ ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಯೂನಿವರ್ಸಿಟಿ ಮೆಡಿಕಲ್ ಸೆಂಟರ್ ಮತ್ತು ನೆದರ್ಲೆಂಡ್ಸ್​ನ ವ್ಯಾಗೆನಿನ್ನ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ, ವಾರಕ್ಕೊಮ್ಮೆ ಸೀ ಫುಡ್ಸ್​ ಸೇವಿಸೋದ್ರಿಂದ ನಿಮ್ಮಲ್ಲಿರುವ ವೀಕ್​ ಮೆಮೋರಿ ಪವರನ್ನ ಇದು ಸ್ಟ್ರಾಂಗ್​ಮಾಡುತ್ತೆ ಅಂತಾ ತಿಳಿದುಬಂದಿದೆ.

ನೆನಪಿನಲ್ಲಿಡಿ..!

ಆದ್ರೆ ನೆನಪಿನಲ್ಲಿಡಿ, ಇಲ್ಲಿ ಗಂಡ-ಹೆಂಡತಿ ಇಬ್ಬರೂ ಈ ಆಹಾರವನ್ನು ಅನುಸರಿಸಬೇಕು. ಇದು ಕೇವಲ ಮಹಿಳೆಯರು ಮಾತ್ರ ಒತ್ತು ಕೊಟ್ಟು ಅನುಸರಿಸಲಿಕ್ಕಲ್ಲ. ಬದಲಾಗಿ ಪೇರೆಂಟ್​ ಆಗಬೇಕು ಅಂತಾ ಬಯಸುವ ಪ್ರತಿ ಗಂಡು, ಹೆಣ್ಣು ವೀಕ್ಲಿ ಟ್ವೈಸ್​ ಸಿ ಫುಡ್​ ಡಯಟ್​ ನಿಯಮವನ್ನು ಅನುಸರಿಸಬೇಕು ಅಂತಾ ತಜ್ಞರು ಸೂಚಿಸಿದ್ದಾರೆ.
ವಿಶೇಷ ಬರಹ – ವಿದ್ಯಾ ಕೆ.ಹೆಚ್‌

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv