ಚೀನಾಗೆ ಸುಂಕದ ಚಡಿಯೇಟು ಕೊಡಲು ಟ್ರಂಪ್​ ಸಜ್ಜು

ವಾಷಿಂಗ್ಟನ್​: ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಚೀನಾ ವಿರುದ್ಧ ಸಿಡಿದಿದ್ದಾರೆ. ಚೀನಾದಿಂದ ಹಲವು ವರ್ಷಗಳಿಂದ ನಾವು ಮೋಸಕ್ಕೊಳಗಾಗುತ್ತಿದ್ದೇವೆ ಎಂದಿರುವ ಟ್ರಂಪ್​, ಚೀನಾದಿಂದ ಆಮದಾಗುವ ಎಲ್ಲಾ ಸರಕುಗಳ ಮೇಲೆ ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದಾರೆ. ಅಗತ್ಯ ಬಿದ್ದರೆ ಚೀನಾದಿಂದ ಆಮದಾಗುವ 500 ಬಿಲಿಯನ್​ ಡಾಲರ್​​ ಮೌಲ್ಯದ ಎಲ್ಲಾ ಸರಕುಗಳಿಗೆ ಸುಂಕ ವಿಧಿಸುವುದಾಗಿ ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಚೀನಾದಿಂದ ಆಮದಾಗುವ ಸರಕುಗಳ ಮೇಲೆ 34 ಬಿಲಿಯನ್​ ಡಾಲರ್​ಗಳಷ್ಟು ಟ್ಯಾಕ್ಸ್​​ ವಿಧಿಸಲು ಅಮೆರಿಕಾ ನಿರ್ಧರಿಸಿತ್ತು. ಇದಕ್ಕೆ, ಪ್ರತ್ಯುತ್ತರವಾಗಿ ಚೀನಾ ಕೂಡ ಅಮೆರಿಕಾದಿಂದ ಆಮದಾಗುವ ವಸ್ತುಗಳಿಗೆ ಅದೇ ಮಟ್ಟದ ಟ್ಯಾಕ್ಸ್​​ ವಿಧಿಸಿ ಟಾಂಗ್​ ಕೊಡಲು ರೆಡಿಯಾಗಿತ್ತು. ಇದು ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ಚೀನಾ ವಿರುದ್ಧ ಟ್ರಂಪ್​ ಗುಡುಗಲು ಕಾರಣವಾಗಿದೆ. ಅಲ್ಲದೇ ಇದರ ಹಿಂದೆ ರಾಜಕೀಯ ಉದ್ದೇಶವಿಲ್ಲ. ನನ್ನ ದೇಶಕ್ಕಾಗಿ ಈ ನಿರ್ಧಾರ ಕೈಗೊಳ್ಳಬೇಕಾದರೆ ಅದನ್ನು ಮಾಡಿಯೇ ತೀರುತ್ತೇನೆ ಎಂದಿದ್ದಾರೆ.

ಯಾವುದೇ ರೀತಿಯ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ contact@firstnews.tv