ತನ್ನ ದೇಶಾಭಿವೃದ್ಧಿಗಾಗಿ ಬೇರೆ ದೇಶದಲ್ಲಿ ಟ್ರಕ್​ ಅನ್​ಲೋಡ್​ ಮಾಡ್ತಾರೆ ಪ್ರೆಸಿಡೆಂಶಿಯಲ್​​​ ಕ್ಯಾಂಡಿಡೇಟ್​!

ರಿಚ್​ಮಾಂಡ್​, ವರ್ಜಿನಿಯಾ​: ಒಂದು ದೇಶದ ನಾಯಕರು ಅಂದ್ರೆ ಠಾಕು, ಠೀಕಾಗಿ ಫುಲ್ ಮಿಂಚ್ತಾ ಇರೋರನ್ನ ನಾವು ನೋಡಿದ್ದೇವೆ. ಅದೇ ರೀತಿಯಲ್ಲಿ ಹಲವು ನಾಯಕರು ಮಾದರಿಯಾಗಿದ್ದನ್ನೂ ನಾವು ಕಂಡಿದ್ದೇವೆ. ಇಲ್ಲೊಬ್ಬ ಜನನಾಯಕ ತನ್ನ ದೇಶದ ಪ್ರಜೆಗಳಿಗೆ ಮಾದರಿಯಾಗಿದ್ದಾರೆ. ಬೆಳಗ್ಗೆಯೆಲ್ಲಾ ತನ್ನ ಚುನಾವಣಾ ಪ್ರಚಾರದಲ್ಲಿ ತೊಡಗುವ ದಕ್ಷಿಣ ಸುಡಾನ್​ನ ಅಧ್ಯಕ್ಷ ಚುನಾವಣೆ ಅಭ್ಯರ್ಥಿ, ರಾತ್ರಿ ಆಯ್ತಂದ್ರೆ ಕೂಲಿ ಕೆಲಸ ಮಾಡ್ತಾರೆ.

ದಕ್ಷಿಣ ಸುಡಾನ್ ಪ್ರೆಸಿಡೆಂಟ್ ಚುನಾವಣೆಗೆ ಸ್ಪರ್ಧಿಸಿರುವ ಬೊಲ್ ಗೈ ಡೆಂಗ್ ಕಳೆದ 6 ವರ್ಷಗಳಿಂದ ನೈಟ್ ಶಿಫ್ಟ್​ನಲ್ಲಿ ಟ್ರಕ್​ಗಳಲ್ಲಿ ಬರುವ ವಸ್ತುಗಳನ್ನ ಅನ್​ಲೋಡ್ ಮಾಡೋದನ್ನ  ತಮ್ಮ ಕಾಯಕವಾಗಿಸಿಕೊಂಡಿದ್ದಾರೆ. ಅಮೆರಿಕಾದ ವರ್ಜಿನಿಯಾದಲ್ಲಿರುವ ರಿಚ್​ಮಂಡ್​ಗೆ ಸುಡಾನ್​ನಿಂದ ವಲಸೆ ಬಂದಿದ್ದ ಬೊಲ್ ಗೈ, ಕಬ್ಬಿಣದ ಕಂಬಿಗಳನ್ನ ಅನ್​ಲೋಡ್ ಮಾಡುವ ಕೆಲಸವನ್ನ ಮಾಡ್ತಾರೆ. ನನ್ನ ದೇಶದ ಅಭಿವೃದ್ಧಿಗಾಗಿ ನಾನು ಕೆಲಸ ಮಾಡ್ತಿದ್ದೇನೆ. ಯಾರ ಮೆಚ್ಚುಗೆಗಾಗಿಯೂ ಕೆಲಸ ಮಾಡ್ತಿಲ್ಲ ಅಂತ ಅವ್ರು ಹೇಳಿದ್ದಾರೆ.

ಆಫ್ರಿಕಾಗೆ ಬೇಕಿರುವುದು ಆಡಳಿತಗಾರರಲ್ಲ, ನಾಯಕರು. ನಾನು ಅಮೆರಿಕದಲ್ಲಿ ತರಬೇತಿ ಪಡೆದಿರುವುದರಿಂದ ನಾಯಕನಾಗಿದ್ದೇನೆ ಅಂತಾರೆ 30ರ ಆಸುಪಾಸಿನಲ್ಲಿರುವ ಬೊಲ್ ಗೈ, ಅವರಿಗೆ ತಮ್ಮ ವಯಸ್ಸೆಷ್ಟು ಅನ್ನುವುದು ಕೂಡ ಸರಿಯಾಗಿ ಗೊತ್ತಿಲ್ಲ. ಯುದ್ಧ ಪೀಡಿತ ಸುಡಾನ್​ನಲ್ಲಿ ಚುನಾವಣೆ ನಡೆಸುವಂತೆ ಕಳೆದ ನವೆಂಬರ್​ನಲ್ಲಿ ಬೊಲ್ ಗೈ ಕೋರಿದ್ದರು. ಆದ್ರೆ, ಇದನ್ನ ದಕ್ಷಿಣ ಸುಡಾನ್​ನ ಅಧ್ಯಕ್ಷ ಸಲ್ವಾ ಕಿರ್ ವಿರೋಧಿಸಿದ್ದರು. ಸದ್ಯ ಅಲ್ಲಿ ಚುನಾವಣೆ ನಡೆಯುತ್ತಿದ್ದು, ಬೊಲ್ ಗೈ, ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿದ್ದಾರೆ.

ಇಲ್ಲಿವರೆಗೂ ತಮ್ಮ ತಾಯ್ನಾಡಿಗೆ ಹಿಂದಿರುಗಲು ಸಾಧ್ಯವಾಗದ ಬೊಲ್ ಗೈ, ಅಮೆರಿಕಾದಲ್ಲಿದ್ದುಕೊಂಡೇ ಎಲೆಕ್ಷನ್​​ಗೆ ಕಂಟೆಸ್ಟ್ ಮಾಡ್ತಿದ್ದಾರೆ. ಉಗಾಂಡ, ಕೀನ್ಯಾ ಮತ್ತು ಇಥಿಯೋಪಿಯಾಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ್ರೂ, ಬೊಲ್ ಗೈಗೆ ದಕ್ಷಿಣ ಸುಡಾನ್​ಗೆ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾ ನೆರವಿನಿಂದಲೇ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಈ ಬಾರಿ ತಾವೇ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೆ, ಬೊಲ್ ಗೈರ ಸಹೋದ್ಯೋಗಿಗಳು ಈಗಾಗಲೇ ಅವರನ್ನ ಮಿಸ್ಟರ್ ಪ್ರೆಸಿಡೆಂಟ್ ಅಂತಲೇ ಸಂಬೋಧಿಸುತ್ತಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv