ಯಶವಂತಪುರ ಫ್ಲೈಓವರ್​ ಮೇಲಿಂದ ಬಿದ್ದ ಟ್ರಕ್​, ಕ್ಲೀನರ್​ ಸಾವು

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಟ್ರಕ್​ವೊಂದು ಫ್ಲೈ ಓವರ್​ನಿಂದ ಕೆಳಗೆ ಬಿದ್ದಿರುವ ಘಟನೆ ನಗರದ ಯಶವಂತಪುರದಲ್ಲಿ ನಡೆದಿದೆ. ಪರಿಣಾಮ ಟ್ರಕ್​ ಕ್ಲೀನರ್​ ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಪೂಣೆಯಿಂದ-ಬೆಂಗಳೂರಿಗೆ ಹಣಬೆ ತುಂಬಿಕೊಂಡು ಬರುತ್ತಿದ್ದ ವೇಳೆ ಯಶವಂತಪುರ ಪ್ಲೈ ಓವರ್​ ಮೇಲಿನಿಂದ ಟ್ರಕ್​​​ ಕೆಳಗೆ ಬಿದ್ದಿದೆ. ಘಟನೆ ಸಂಬಂಧ ಯಶವಂತಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv