ಕ್ರಿಕೆಟ್ ಬ್ಯಾಟ್ ಹಿಡಿದ ಮಹಾರಾಣಿ ತ್ರಿಷಿಕಾ

ಮೈಸೂರು: ಮೈಸೂರು ರಾಜವಂಶಸ್ಥೆ, ರಾಜಕುಮಾರಿ ತ್ರಿಷಿಕಾ ಕುಮಾರಿ ಇಂದು ಕ್ರಿಕೆಟ್ ಬ್ಯಾಟ್​ ಹಿಡಿದು ಕ್ರಿಕೆಟ್​ ಆಡುವ ಮೂಲಕ ಗಮನಸೆಳೆದರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಮರಣಾರ್ಥ ಆಯೋಜನೆ ಮಾಡಲಾಗಿದ್ದ ಕ್ರಿಕೆಟ್ ಪಂದ್ಯಾವಳಿಗೆ ಯದುವೀರ್ ಒಡೆಯರ್​ ಪತ್ನಿ ತ್ರಿಷಿಕಾ ಇಂದು ಚಾಲನೆ ನೀಡಿದ್ರು. ಫೀಲ್ಡಿಗಿಳಿದು ಬ್ಯಾಟ್ ಬೀಸುವ ಮೂಲಕ, ಕ್ರಿಕೆಟ್ ಪಂದ್ಯಾವಳಿಗೆ ಅವರು ಚಾಲನೆ ಕೊಟ್ರು.

ಅರಸು ಮಂಡಳಿ ವತಿಯಿಂದ, ಮಾನಸಗಂಗೋತ್ರಿ ಕಾಫಿ ಬೋರ್ಡ್ ಮೈದಾನದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಕ್ರಿಕೆಟ್ ಪಂದ್ಯಾವಳಿಯಲ್ಲಿ 12 ತಂಡಗಳು  ಭಾಗವಹಿವೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv