ಮರ ಉರುಳಿ ಅರ್ಧಕ್ಕೆ ನಿಂತ ನೇಮೋತ್ಸವ

ಉಡುಪಿ: ಮರ ಉರುಳಿ ಬಿದ್ದ ಕಾರಣ ನೇಮೋತ್ಸವ ಅರ್ಧಕ್ಕೆ ನಿಂತ ಘಟನೆ ಬೆಳಪು ಪಣಿಯೂರು ನಾಂಜೂರಿನಲ್ಲಿ ನಡೆದಿದೆ. ನಾಂಜೂರಿನ ಧರ್ಮ ದೈವಸ್ಥಾನ ನೇಮೋತ್ಸವದ ದೈವ ನರ್ತನಕ್ಕೆ ಮೊದಲು ಅವಘಡ ಸಂಭವಿಸಿದೆ. ಈ ವೇಳೆ ಮರದಡಿ ಸಿಲುಕಿದ ವ್ಯಕ್ತಿಗೆ ಗಾಯವಾಗಿವೆ. ನೇಮೋತ್ಸವದಲ್ಲಿ ಸಾವಿರಾರು ಭಕ್ತಾಧಿಗಳು ಸೇರಿದ್ದರು. ಅದೃಷ್ಟವಶಾತ್ ಎಲ್ಲಾ ಭಕ್ತಾಧಿಗಳು ಅಪಾಯದಿಂದ ಪಾರಾಗಿದ್ದಾರೆ. ನಿನ್ನೆ ಮಧ್ಯರಾತ್ರಿ ಸುರಿದ ಮಳೆಯಿಂದಾಗಿ ದೈವಸ್ಥಾನಕ್ಕೂ ಅಲ್ಪ-ಸ್ಪಲ್ಪ ಹಾನಿಯಾಗಿದೆ.