ಹೈಟೆನ್ಷನ್​ ವಿದ್ಯುತ್​ ತಂತಿ ತಗಲಿ ಮರದ ಕೊಂಬೆಗೆ ಬೆಂಕಿ

ಹುಬ್ಬಳ್ಳಿ: ಹೈಟೆನ್ಷನ್​​ ವಿದ್ಯುತ್​ ತಂತಿ ಸ್ಪರ್ಶದಿಂದ ಮರದ ಕೊಂಬೆಗೆ ಬೆಂಕಿ ಹೊತ್ತಿಕೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಗ್ರಾಮದ ಚಳ್ಳನಕೆರೆ ಬಳಿ ಇಂದು ಬೆಳಗ್ಗೆ ನಡೆದಿದೆ.
ಬೆಳಗ್ಗೆಯಿಂದ ಮರದ ಕೊಂಬೆಯಲ್ಲಿ ಬೆಂಕಿ ಆವರಿಸಿಕೊಂಡರೂ ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ. ವಿದ್ಯುತ್​ ತಂತಿಯಿಂದಾಗಿ ಹೊತ್ತಿಕೊಂಡ ಬೆಂಕಿಯನ್ನು ನೋಡಿ ಚಳ್ಳನಕೆರೆ ಗ್ರಾಮದವರು ಆತಂಕಗೊಂಡಿದ್ದಾರೆ. ಹೆಸ್ಕಾಂ ಆಡಳಿತ ವ್ಯವಸ್ಥೆ ವಿರುದ್ಧ ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ಗ್ರಾಮ ಪಂಚಾಯತ್​​ ಸಿಬ್ಬಂದಿಯೂ ಕೂಡ ಸ್ಥಳಕ್ಕೆ ಬಂದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂರ್ಪಕಿಸಿ:contact@firstnews.tv