ಬಸವಣ್ಣನಿಗೆ ವಾಮಾಚಾರ ಮಾಡಿ ನಿಧಿಗಳ್ಳತನಕ್ಕೆ ವಿಫಲಯತ್ನ!

ಬಾಗಲಕೋಟೆ: ನಿಧಿಗಾಗಿ ಬಸವಣ್ಣನ ಮೂರ್ತಿಯನ್ನ ವಿರೂಪಗೊಳಿಸಿದ ಪ್ರಕರಣ ಒಂದು ನಡೆದಿದೆ. ನಿನ್ನೆ ರಾತ್ರಿ ‌ಜಿಲ್ಲೆಯ ಹುನಗುಂದ ತಾಲೂಕಿನ ಐಹೊಳೆ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಕಳ್ಳರ ತಂಡವೊಂದು ನಿಧಿ ಆಸೆಗಾಗಿ ಎಂಟ್ರಿ ಕೊಟ್ಟಿತ್ತು. ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಬಸವಣ್ಣನ ಮೂರ್ತಿಗೆ ವಾಮಾಚಾರ ಮಾಡಿದ ಕಳ್ಳರ ಟೀಂ, ನಂತರ ನಿಧಿಗಾಗಿ ಶೋಧ ನಡೆಸಿದ್ದಾರೆ. ಆದರೆ ದೇವಾಲಯದಲ್ಲಿ ಯಾವುದೇ ನಿಧಿ ಸಿಗದ ಹಿನ್ನೆಲೆಯಲ್ಲಿ ವಾಪಸ್ ಆಗಿದ್ದಾರೆ. ಅಮೀ‌ನಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂರ್ಪಕಿಸಿ: contact@firstnews.tv