ಭಾರತ ಯಾತ್ರೆ ಆಧ್ಯಾತ್ಮಿಕವಾಗಿ ನನ್ನನ್ನು ಹೊಸದಾಗಿ ಶೋಧಿಸಿದೆ -ವಿಲ್​ ಸ್ಮಿತ್

ನವದೆಹಲಿ: ಹಾಲಿವುಡ್​ ನಟ ವಿಲ್​ ಸ್ಮಿತ್​​ಗೆ ಭಾರತ ಅಂತಂದ್ರೆ ಭಾರೀ ಆಪ್ಯಾಯಮಾನ. ಇದನ್ನು ಮತ್ತೊಮ್ಮೆ ರುಜುವಾತುಪಡಿಸಿದ್ದಾರೆ. ಈ ಬಾರಿ ಅವರು ಇನ್ಸ್​​ಟಾಗ್ರಾಂನಲ್ಲಿ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ಭಾರತ ದೇಶದಲ್ಲಿ ಯಾತ್ರೆ ಮಾಡುವ ಮೂಲಕ ನನ್ನನ್ನು ನಾನೇ ಹೊಸದಾಗಿ ಶೋಧಿಸಿಕೊಂಡೆ ಎಂದು ಹೆಮ್ಮೆಪಟ್ಟಿದ್ದಾರೆ. ಆಧ್ಯಾತ್ಮಿಕವಾಗಿ ತಮ್ಮನ್ನು ಗುರುತಿಸಿಕೊಂಡು ಇನ್ಸ್​​ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವುದಕ್ಕೆ ಅದಾಗಲೇ ಸುಮಾರು 16 ಲಕ್ಷ ಲೈಕ್​​ಗಳನ್ನು ಗಳಿಸಿದೆ.

ದೇವರು ಅನುಭವದ ಮೂಲಕ ನಮಗೆ ಪಾಠ ಕಲಿಸುತ್ತಾನೆ ಎಂದು ನಮ್ಮ ಅಜ್ಜಿ ಹೇಳುತ್ತಿದ್ದರು. ಇದೀಗ ಭಾರತಕ್ಕೆ ಪ್ರಯಾಣ ಮಾಡುವ ಮೂಲಕ ಇಲ್ಲಿನ ವೈವಿಧ್ಯಮಯ ಜನ, ನಿಸರ್ಗ ಸಂಪತ್ತನ್ನು ವೀಕ್ಷಿಸುವ ಮೂಲಕ ನನ್ನ ಬಗ್ಗೆ ನನಗೆ ಹೊಸ ಹೊಳಹು ದೊರೆತಿದೆ. ನನ್ನ ಕಲೆ ಮತ್ತು ಜಗತ್ತಿನ ನೈಜತೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಹಾಯಕವಾಗಿದೆ ಎಂದು ನಟ ವಿಲ್​ ಸ್ಮಿತ್​​ ಹೇಳಿಕೊಂಡಿದ್ದಾರೆ.