ನಿಲ್ದಾಣದಲ್ಲಿ ಮಹಿಳಾ ಶೌಚಾಲಯಕ್ಕೆ ಭೇಟಿ ನೀಡಿದ ಸಾರಿಗೆ ಸಚಿವರು

ಚಿಕ್ಕಮಗಳೂರು: ಸ್ವಚ್ಛತೆ/ಸೌಕರ್ಯ ಪರಿಶೀಲಿಸಲು ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಅವರು ಮಹಿಳಾ ಶೌಚಾಲಯಕ್ಕೆ ದಿಢೀರ್ ಭೇಟಿ ನೀಡಿದ್ದಾರೆ. ಚಿಕ್ಕಮಗಳೂರಿನ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿರುವ ಮಹಿಳಾ ಶೌಚಗೃಹಕ್ಕೆ ಸಚಿವ ತಮ್ಮಣ್ಣ ತೆರಳಿದ್ರು. ಸಚಿವರ ಏಕಾಏಕಿ ಭೇಟಿಯಿಂದ ಸ್ಥಳದಲ್ಲೇ ಇದ್ದ ಮಹಿಳೆಯರು ಮುಜುಗರಕ್ಕೀಡಾದರು. ಇನ್ನು ಶೌಚಾಲಯ ಪರೀಕ್ಷಿಸಿದ ತಮ್ಮಣ್ಣ ಶೌಚಾಲಯದಲ್ಲಿ ನೀರು ಇಲ್ಲದ್ದನ್ನು ಕಂಡು ಅಧಿಕಾರಿಗಳನ್ನ ಅಲ್ಲೇ ತರಾಟೆಗೆ ತೆಗೆದುಕೊಂಡರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv