ಪೊಲೀಸ್ ಇಲಾಖೆಯಿಂದ ಮಂಗಳಮುಖಿಯರ ಹಕ್ಕುಗಳ ಬಗ್ಗೆ ಜಾಗೃತಿ ಸಭೆ

ದಾವಣಗೆರೆ: ಲೈಂಗಿಕ ಅಲ್ಪಸಂಖ್ಯಾತರು ತಮ್ಮ ಚಟುವಟಿಕೆಗಳಿಂದ ವಿಮುಖರಾಗಬೇಕಿದ್ದರೆ ತಮಗೆ ಹಕ್ಕುಗಳ ಪ್ರಕಾರ ಮೂಲಸೌಲಭ್ಯಗಳನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ. ಮಂಗಳಮುಖಿಯರು ಭಿಕ್ಷಾಟನೆ ಹಾಗೂ ಸೆಕ್ಸ್ ವರ್ಕ್ ತಡೆ ಹಿಡಿಯುವ ಉದ್ದೇಶದಿಂದ ಇಂದು ನಡೆದ ಪೊಲೀಸ್ ಇಲಾಖೆ ಮತ್ತು ಮಂಗಳಮುಖಿಯರ ಸಭೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಈ ಆಗ್ರಹ ಮಾಡಿದರು. ಮಂಗಳಮುಖಿಯರ ಸಮುದಾಯ ಸಮಾಜದಿಂದ ತಿರಸ್ಕಾರಕ್ಕೆ ಒಳಗಾಗಿದ್ದು, ಯಾವುದೇ ಹಕ್ಕುಗಳನ್ನು ಪಡೆದುಕೊಂಡಿಲ್ಲ. ಹೀಗಾಗಿ, ಅವರು ಅನಿವಾರ್ಯವಾಗಿ ಸೆಕ್ಸ್ ದಂಧೆ ಹಾಗೂ ಭಿಕ್ಷಾಟನೆಗೆ ಇಳಿಯುತ್ತಿದ್ದಾರೆ. ಅವರು ಈ ಕಾರ್ಯಚಟುವಟಿಕೆಗಳಿಂದ ವಿಮುಖರಾಗಬೇಕಾದರೆ ಅವರಿಗೆ ಸರಕಾರದಿಂದ ಪುನರ್ವಸತಿ ಯೋಜನೆಯಲ್ಲಿ ಮನೆಯನ್ನು ಕೊಡಲಿ ಕೆಲಸ ಕೊಡಲಿ ಭಿಕ್ಷಾಟನೆ ಮತ್ತು ಸೆಕ್ಸ್ ವರ್ಕ್ ಕೆಲಸವನ್ನ ಬಿಡಲಿಕ್ಕೆ ರೆಡಿ ಇದೀವಿ. ಪುನರ್ವಸತಿ ಯೊಜನೆಯನ್ನ ಪರಿಕಲ್ಪನೆ ಮಾಡದೇ ಯಾವುದೇ ಭದ್ರತೆ ಇಲ್ಲದೇ ಈ ಸಮುದಾಯ ಎಲ್ಲಿ ಹೋಗಿ ಜೀವನ ಮಾಡಬೇಕು? ಈ ಸಮುದಾಯದ ಅಸ್ತಿತ್ವವೇನು ಎಂದು ಪ್ರಶ್ನಿಸಿದರು. ಸರಕಾರ ಈ ಸಮುದಾಯದ ಬಗ್ಗೆ ಗಮನ ಹರಿಸಬೇಕು. ಜಿಲ್ಲಾಡಳಿತ ಈ ಸಮುದಾಯದ ಮೂಲಭೂತ ಹಕ್ಕುಗಳೇನು ಅವರ ಅವಶ್ಯಕತೆಗಳೇನು, ಅದರ ಬಗ್ಗೆ ಆ ಸಮುದಾಯದ ಜೊತೆ ಸಭೆ ನಡೆಸಿ ನಂತರ ನಿರ್ಧಾರ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv