ಅಧಿಕ ವಿದ್ಯುತ್​ ಪ್ರವಾಹ, ಟ್ರಾನ್ಸ್​ಫಾರ್ಮರ್ ಭಸ್ಮ..!

ಕಲಬುರ್ಗಿ: ಶಾಟ್೯ ಸರ್ಕ್ಯೂರ್ಟ್​ನಿಂದಾಗಿ ವಿದ್ಯುತ್ ಟ್ರಾನ್ಸಫಾರ್ಮರ್​ವೊಂದು ಹೊತ್ತಿ ಉರಿದಿರುವ ಘಟನೆ ಚಿಂಚೋಳಿ ತಾಲೂಕಿನ ಹೊಸಳ್ಳಿ (ಎಚ್) ಗ್ರಾಮದಲ್ಲಿ ನಡೆದಿದೆ. ಗ್ರಾಮದ ಜನನಿಬಿಡ ಪ್ರದೇಶದಲ್ಲಿಯೇ ಇರುವ ಟ್ರಾನ್ಸ್​ಫಾರ್ಮರ್ ಸುಟ್ಟು ಭಸ್ಮವಾಗಿದೆ. ಸದ್ಯ ಟ್ರಾನ್ಸ್​ ಫಾರ್ಮರ್​ನ ಶಾರ್ಟ್​ ಸರ್ಕ್ಯೂಟ್​ಗೆ ಹೈ-ವೋಲ್ಟೆಜ್‌ ಕಾರಣ ಎಂದು ಹೇಳಲಾಗ್ತಿದೆ. ಸ್ಥಳಕ್ಕೆ ಭೇಟಿ ನೀಡಿದ ಜೆಸ್ಕಾಂ‌ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಘಟನೆ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಿಳಿದುಬಂದಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv