ಹಳಿಯಲ್ಲಿ ಬಿರುಕು: ತಪ್ಪಿದ ಭಾರೀ ರೈಲು ದುರಂತ

ಆನೇಕಲ್: ಬೆಂಗಳೂರು-ಹೊಸೂರು ನಡುವಿನ ರೈಲ್ವೆ‌ ಮಾರ್ಗದಲ್ಲಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಆನೇಕಲ್​ನ ಇಗ್ಗಲೂರು ಬಳಿ ರೈಲ್ವೆ ಹಳಿಯಲ್ಲಿ ಬಿರುಕು ಉಂಟಾಗಿತ್ತು. ರೈಲ್ವೆ‌ ಹಳಿಯಲ್ಲಿನ ಈ ದೋಷ ಸಮಯಕ್ಕೆ ಸರಿಯಾಗಿ ಪತ್ತೆಯಾಗಿದ್ದು, ಭಾರೀ ರೈಲು ದುರಂತ ತಪ್ಪಿದಂತಾಗಿದೆ. ದೋಷದ ಹಿನ್ನೆಲೆಯಲ್ಲಿ 1 ಗಂಟೆ ಕಾಲ ರೈಲು ಸಂಚಾರ ತಡೆ ಹಿಡಿಯಲಾಗಿತ್ತು. ವಿಷಯ ತಿಳಿದ ಕೂಡಲೇ ರೈಲ್ವೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ಕೊಟ್ಟಿದ್ದು, ಹಳಿ ದುರಸ್ಥಿಗೊಳಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv