ಟ್ರಾಯ್ ಅಧ್ಯಕ್ಷ ಆರ್‌.ಎಸ್‌.ಶರ್ಮಾ ಅಧಿಕಾರವಧಿ ವಿಸ್ತರಣೆ

ನವದೆಹಲಿ: ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅಧ್ಯಕ್ಷ ರಾಮ್‌ ಸೇವಕ್ ಶರ್ಮಾ ಅವರ ಅವಧಿಯನ್ನು 2 ವರ್ಷ ವಿಸ್ತರಿಸಲಾಗಿದೆ. 65 ವರ್ಷದ ಆರ್‌.ಎಸ್‌. ಶರ್ಮಾ ಅವರ ಅಧಿಕಾರವಧಿ ಮುಗಿದಿತ್ತು. ಇದೀಗ ಮತ್ತೆ ಅವರ ಅಧಿಕಾರವಧಿಯನ್ನ ವಿಸ್ತರಣೆ ಮಾಡಿ ಸಚಿವ ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ. ಟ್ರಾಯ್‌ಗೆ ಸಂಬಂಧಿಸಿದ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತರುವಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ಆರ್‌.ಎಸ್‌. ಶರ್ಮಾ ಆಧಾರ್ ಸಂಖ್ಯೆಯನ್ನ ಬಹಿರಂಗಗೊಳಿಸುವುದರಿಂದ ಯಾವುದೇ ಹಾನಿ ಉಂಟಾಗುವುದಿಲ್ಲ ಎಂದು ಹೇಳುವ ಮೂಲಕ ಹ್ಯಾಕರ್ಸ್‌ಗಳಿಗೆ ಬಹಿರಂಗ ಸವಾಲನ್ನ ನೀಡಿ ಸುದ್ದಿಯಾಗಿದ್ದರು. ಮತ್ತೆ ಈ ಕುರಿತು ಟ್ವೀಟ್ ಮಾಡಿ ಶರ್ಮಾ ತಮ್ಮ ಆಧಾರ್‌ ನಂಬರ್‌ ಅನ್ನು ಬಹಿರಂಗಗೊಳಿಸಿದ್ದರಿಂದ ಯಾವುದೇ ಹಾನಿಯಾಗಿಲ್ಲ ಎಂದಿದ್ರು. ಶರ್ಮಾ ಅವರ ಸವಾಲಿಗೆ ಯುಐಡಿಎಐ ಮತ್ತು ತಜ್ಞರು ತೀವ್ರವಾಗಿ ಟೀಕಿಸಿದ್ದರು.