ಹೆಲ್ಮೆಟ್ ಹಾಕಿಲ್ಲ ಅಂದ್ರೆ ಯಮನೇ ಬೆನ್ನ ಹಿಂದೆ ಕೂರ್ತಾನೆ.. ಹುಷಾರ್..!

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ನಿಯಂತ್ರಣಕ್ಕೆ ಹಲಸೂರು ಗೇಟ್ ಸಂಚಾರಿ ಪೊಲೀಸ್ರು ವಿನೂತನ ಪ್ರಯತ್ನ ಮಾಡಿದ್ದಾರೆ. ಹೆಲ್ಮೆಟ್ ಹಾಕದೆ ಬೈಕ್ ಚಾಲನೆ ಮಾಡುವವರಿಗೆ ಹಲಸೂರು ಸಂಚಾರಿ ಪೊಲೀಸ್ರು ಯಮನಿಂದ ವಾರ್ನಿಂಗ್ ಎಂಬ ವಿಶೇಷ ಅಭಿಯಾನವನ್ನ ಆಯೋಜನೆ ಮಾಡಿದ್ರು. 

ಈ ವೇಳೆ ಯಮನ ವೇಷಧಾರಿ ರೋಡ್‌ನಲ್ಲಿ ಹೋಗುವ ಬೈಕ್ ಸವಾರರನ್ನು ತಡೆದು, ಹೆಲ್ಮೆಟ್ ಹಾಕಿಲ್ಲ ಅಂದ್ರೆ ಅಪಾಯ ತಪ್ಪಿದ್ದಲ್ಲ, ಹಾಗಾಗಿ ಹೆಲ್ಮೆಟ್ ಹಾಕಿ ಅಂತಾ ಎಚ್ಚರಿಕೆ ನೀಡಿದ್ರು. ಅಲ್ಲದೇ ಅವರ ಬೈಕನ್ನೇ ಏರಿ ಒಂದು ರೌಂಡು ಕೂಡ ಹಾಕಿಬಂದಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv