ವಿದ್ಯುತ್​ ಕಂಬ ಸಾಗಿಸ್ತಿದ್ದ ಟ್ರ್ಯಾಕ್ಟರ್​ ಪಲ್ಟಿ: 4ದಾರುಣ ಸಾವು

ರಾಯಚೂರು: ವಿದ್ಯುತ್ ಕಂಬಗಳನ್ನು ತುಂಬಿಕೊಂಡು ಹೋಗುತಿದ್ದ ಟ್ರ್ಯಾಕ್ಟರ್​ವೊಂದು ಪಲ್ಟಿಯಾಗಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ಸಿಂಧನೂರು ತಾಲೂಕಿನ ಶ್ರೀರಾಂಪುರ ಕ್ರಾಸ್ ಬಳಿ ನಡೆದಿದೆ. ಮೃತರನ್ನು ಗಂಗಾವತಿ ತಾಲೂಕಿನ‌ ಸುಳೆಕಲ್ ಗ್ರಾಮದ ರಮೇಶ್ (25), ನಾಗರಾಜ್(35) ಹಾಗೂ ಶರಣಪ್ಪ ಹಾಗು ಚಾಲಕ ಮಲ್ಲಪ ಎಂದು ಗುರುತಿಸಲಾಗಿದೆ. ಮೃತರೆಲ್ಲರನ್ನೂ ಸಿಂಧನೂರು ತಾಲೂಕಿನ ಸಾಸಲಮರಿ ಗ್ರಾಮದ ಬಳಿ ವಿದ್ಯುತ್ ಕಂಬ ಹಾಕಲು ಬಂದಿದ್ದ ಕಾರ್ಮಿಕರು ಎನ್ನಲಾಗ್ತಿದೆ. ಕೊಪ್ಪಳದ ಗಂಗಾವತಿ ಕಡೆಯಿಂದ ಸಿಂಧನೂರಿನತ್ತ ವಿದ್ಯುತ್ ಕಂಬಗಳನ್ನು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್​ಅಪಘಾತಕ್ಕೀಡಾಗಿದೆ. ಟ್ರ್ಯಾಕ್ಟರ್​ನಲ್ಲಿದ್ದ ವಿದ್ಯುತ್​ ಕಂಬಗಳು ಒಂದೇ ಕಡೆ ವಾಲಿದ್ದರಿಂದ ಟ್ರ್ಯಾಕ್ಟರ್​ನ ಟ್ರಾಲಿಯ ಕೊಂಡಿ ಕಳಚಿ, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎನ್ನಲಾಗ್ತಿದೆ. ಇನ್ನೂ ಗಂಭೀರವಾಗಿ ಗಾಯಗೊಂಡ ಮೂವರನ್ನು ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಂಧನೂರು ಗ್ರಾಮೀಣ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv