ಮಲೆನಾಡ ಸೊಬಗು ಕೋಟೆನಾಡಲ್ಲಿ.. ಪ್ರವಾಸಿಗರು ಫುಲ್​ ಖುಷ್!

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಸದ್ಯ ಪ್ರವಾಸಿಗರ ಸದ್ದೆ ಹೆಚ್ಚು ಕೇಳುತ್ತಿದೆ. ಕೋಟೆಗೆ ಮಾತ್ರ ಸೀಮಿತವಾಗಿದ್ದ ಜಿಲ್ಲೆ ಇದೀಗ ಮಲೆನಾಡ ಸೊಬಗನ್ನು ಹೊತ್ತು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಇಷ್ಟು ದಿನ ಸಂರಕ್ಷಣೆ ಪ್ರದೇಶವಾಗಿದ್ದು ಸದ್ಯ ಅರಣ್ಯ ಇಲಾಖೆಯೇ ಪ್ರವಾಸಿಗರನ್ನು ಆ ಸ್ಥಳಕ್ಕೆ ಬಿಡಲು ನಿರ್ಧರಿಸಿ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಸುತ್ತಲೂ ಹಸಿರು, ಮೈಗೆ ಬಂದು ಅಪ್ಪುವ ತಂಪಾದ ಮೋಡಗಳು, ಎತ್ತರದಲಿ ನಿಂತು ನೋಡಿದರೆ, ಕಂಡಷ್ಟೂ ಅದ್ಭುತವಾದ ಕಣ್ಣಿಗೆ ಮುದ ನೀಡುವ ರಮಣೀಯ ಸ್ಥಳ. ಇದೆಲ್ಲೋ ಮಡಿಕೇರಿ, ಅಥವಾ ಊಟಿ ಅಂತ ಅನ್ಕೊಂಡ್ರೇ ಖಂಡಿತವಾಗಿ ನಿಮ್ಮ ಊಹೆ ತಪ್ಪು. ಹೌದು ಇದು ಕೋಟೆ ನಾಡು, ಬಿಸಿಲ ನಾಡು ಚಿತ್ರದುರ್ಗದ ಜೋಗಿಮಟ್ಟಿ. ನಂಬಲು ಸಾಧ್ಯವಿಲ್ಲದ ಈ ರಮಣೀಯ ಸ್ಥಳವನ್ನ ವೀಕ್ಷಿಸಲು ಸದ್ಯ ಸಾವಿರಾರು ಪ್ರವಾಸಿಗರು ಜೋಗಿಮಟ್ಟಿಗೆ ಆಗಮಿಸುತ್ತಿದ್ದಾರೆ. ಮಲೆನಾಡನ್ನು ಸಹ ನಾಚಿಸುವ ವಿಹಂಗಮ ನೋಟವುಳ್ಳ ಬಯಲುಸೀಮೆಯ ಮಿನಿ ಊಟಿಯೆಂದೇ ಗುರುತಿಸಿಕೊಂಡಿರುವ ಜೋಗಿಮಟ್ಟಿ ಎಲ್ಲರನ್ನ ತನ್ನತ್ತ ಕೈಬೀಸಿ ಕರೆಯುತ್ತಿದೆ.
ಜೋಗಿಮಟ್ಟಿಗೆ ತೆರಳಬೇಕಾದ್ರೆ ಚಿತ್ರದುರ್ಗ ನಗರದಿಂದ ಸುಮಾರು 12 ಕಿಲೋ ಮೀಟರ್ ಕ್ರಮಿಸಬೇಕು.ಆದ್ರೆ ಈ ಅಪರೂಪದ ಸೊಬಗನ್ನು ಸವಿಯಲು ಪ್ರವಾಸಿಗರು, ಚಾರಣಿಗರು ಮತ್ತು ಔಷಧಿಯ ಸಂಶೋಧಕರು ಭೇಟಿ ನೀಡಲು ಬಯಸಿದರೂ ಸಹ ಅವರಿಗೆ ಸಂರಕ್ಷಿತ ಪ್ರದೇಶಕ್ಕೆ ತೆರಳಲು ಅವಕಾಶ ಇರಲಿಲ್ಲ. ಆದ್ರೀಗ ಅರಣ್ಯ ಇಲಾಖೆ ಪ್ರತಿಯೊಬ್ಬರಿಗೂ ಟಿಕೆಟ್ ನಿಗದಿಪಡಿಸಿದ್ದು ಪ್ರವಾಸಿಗರ ಖುಷಿಗೆ ಕಾರಣವಾಗಿದೆ. ಸುಮಾರು 10,000 ಎಕರೆ ವಿಸ್ತೀರ್ಣ ಹೊಂದಿರುವ ಗಿಮಟ್ಟಿ ಅರಣ್ಯಧಾಮವು ಸುಮಾರು 4,000 ಅಡಿಗೂ ಹೆಚ್ಚು ಎತ್ತರವಿದ್ದು, ಏಷ್ಯಾದಲ್ಲೇ ಅತಿ ಹೆಚ್ಚು ಗಾಳಿ ಬೀಸುವ ಎರಡನೇ ಸುಂಧರ ಗಿರಿಧಾಮವಾಗಿದೆ. ಊಟಿ, ಕೊಡೈಕೆನಾಲ್‍ಗೆ ಹೋಗುವ ಪ್ರವಾಸಿಗರು ಒಮ್ಮೆ ಈ ಜೋಗಿಮಟ್ಟಿಗೆ ಬಂದರೆ ಎಂದೂ ಮರೆಯಲು ಸಾಧ್ಯವೇ ಇಲ್ಲದಂತಹ ದೃಶ್ಯಗಳು ಇಲ್ಲಿ ಕಾಣಸಿಗುತ್ತವೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv