ಕನ್ನಡದ ಈ ಟಾಪ್ ಹೀರೋಯಿನ್ ಯಾರು? ಗೆಸ್ ಮಾಡಿ!

ಹೀಗೆ ಗೊಂಬೆಯಂಥೆ, ಇಷ್ಟಗಲ ಕಣ್ಣು ಬಾಯಿ ಬಿಟ್ಕೊಂಡು ಲಿಟಲ್‌ ಸಿಂಡ್ರೆಲ್ಲಾ ಥರಾ ಕಾಣ್ತಿರೋ ಈ ಮುದ್ದು ಪುಟಾಣಿ ಹುಡುಗಿ ಯಾರು ಗೊತ್ತಾ? ಇವ್ರು ಕನ್ನಡದ ಟಾಪ್ ಹೀರೋಯಿನ್. ರಿಯಲ್‌ ಸ್ಟಾರ್ ಉಪೇಂದ್ರ ಮನದನ್ನೆ, ಬೆಂಗಾಲಿ ಸುರಸುಂದರಿ ಪ್ರಿಯಾಂಕ ಉಪೇಂದ್ರ.

ಹೌದು. ಇದು ಪ್ರಿಯಾಂಕ ಉಪೇಂದ್ರ ಅವ್ರ 4ನೇ ವರ್ಷದ ಹುಟ್ಟುಹಬ್ಬದಂದು ತೆಗೆದ ಫೋಟೋ. ಪ್ರಿಯಾಂಕ ಮೂಲತಃ ಪಶ್ಚಿಮ ಬಂಗಾಳದವರು. ಅಲ್ಲೇ ಹುಟ್ಟಿ ಬೆಳೆದು ಸಿನಿಮಾ ರಂಗಕ್ಕೆ ಬಂದು ಕರ್ನಾಟಕದ ಸೊಸೆಯಾಗಿ ಈಗ ಅಪ್ಪಟ ಕನ್ನಡತಿಯಾಗಿದ್ದಾರೆ. 4 ವರ್ಷದವರಾಗಿದ್ದಾಗ ಬಂಗಾಳದಲ್ಲೇ ತೆಗೆದ ಫೋಟೋಯಿದು. ತಮ್ಮ ಬಾಲ್ಯದ ಸವಿನೆನಪಿನಲ್ಲಿ ಕೆಲ ಫೋಟೋಗಳನ್ನ ತಮ್ಮ ಇನ್ಸ್‌ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ಪ್ರಿಯಾಂಕ ಬಾಲ್ಯ ಹೀಗಿತ್ತು!
ಪ್ರಿಯಾಂಕ ಉಪೇಂದ್ರ ಯುಎಸ್‌ಎ,ಕ್ಯಾಲಿಫೋರ್ನಿಯಾ,ಲಾಸ್‌ ಏಂಜೆಲ್ಸ್‌ನಲ್ಲಿ ಕಳೆದ ಬಾಲ್ಯದ ದಿನಗಳನ್ನೂ ಒಂದು ಫೋಟೋ ಮೂಲಕ ನೆನಪಿಸಿಕೊಂಡಿದ್ದಾರೆ. ಅಲ್ಲಿರೋ ಡಿಸ್ನಿಲ್ಯಾಂಡ್ ನಮ್ಮಿಡೀ ಕುಟುಂಬದ ನೆಚ್ಚಿನ ಜಾಗವಾಗಿತ್ತು. ಅಲ್ಲಿಗೇ ಹೋಗ್ತಿದ್ವಿ.ಇದು ನನ್ನ ಆಂಟಿ,ಅಂಕಲ್ ಹಾಗೂ ಲವ್ಲಿ ಅಮ್ಮ ಅಂತಾ ಫೋಟೋ ಅಪ್ಲೋಡ್ ಮಾಡಿ ಬರೆದುಕೊಂಡಿದ್ದಾರೆ.ಇವರ ಜೊತೆ ಪ್ರಿಯಾಂಕ ಕುಟುಂಬದ ಅವರದ್ದೇ ಓರಗೆಯ ಇಬ್ಬರು ಮಕ್ಕಳೂ ಕೂಡ ಇದ್ದಾರೆ.