ಸಿಜೆಐ ಲೈಂಗಿಕ ಕಿರುಕುಳ ಆರೋಪ: ಸಿಬಿಐ, ಗುಪ್ತಚರ ಇಲಾಖೆ, ದೆಹಲಿ ಪೊಲೀಸ್​ಗೆ ಸುಪ್ರೀಂ ನೋಟಿಸ್​

ನವದೆಹಲಿ: ಸುಪ್ರೀಂ ಕೋರ್ಟ್​​​ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದಲ್ಲಿ ದೊಡ್ಡ ಷಡ್ಯಂತ್ರವೇ ನಡೆದಿದೆ ಎಂದು ಆರೋಪಿಸಿದ್ದ ವಕೀಲ ಉತ್ಸವ್ ಬೈನ್ಸ್​ಗೆ ಸುಪ್ರೀಂ ಕೋರ್ಟ್​ ಸಮನ್ಸ್ ನೀಡಿತ್ತು. ನಿಮ್ಮ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನ ಸಲ್ಲಿಸಿ ಅಂತಾ ಈ ಹಿಂದೆ ನೋಟಿಸ್ ನೀಡಿತ್ತು. ಇಂದು ಆರೋಪ ಸಂಬಂಧ ಸುಪ್ರೀಂಕೋರ್ಟ್​​ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸಿಜೆಐ ರಂಜನ್ ಗೊಗೋಯ್ ವಿರುದ್ಧ ಏನೆಲ್ಲಾ ಷಡ್ಯಂತ್ರ ನಡೆದಿದೆ ಅನ್ನೋದರ ಬಗ್ಗೆ ಮುಚ್ಚಿದ ಲಕೋಟೆಯಲ್ಲಿ ವಕೀಲ ಉತ್ಸವ್ ಅವರು ಕೋರ್ಟ್​ಗೆ ಮಾಹಿತಿ ನೀಡಿದರು. ಜಸ್ಟೀಸ್​ಗಳಾದ ​ಅರುಣ್ ಮಿಶ್ರಾ, ಆರ್.​ಎಫ್​ ನಾರಿಮನ್ ಮತ್ತು ದೀಪಕ್ ಗುಪ್ತಾ ಅವರು ವಕೀಲರು ನೀಡಿದ ಮಾಹಿತಿಯನ್ನ ಪರಿಶೀಲನೆ ನಡೆಸಿದರು. ನಂತರ ಸಿಬಿಐ ಮುಖ್ಯಸ್ಥರಿಗೆ, ಗುಪ್ತಚರ ಇಲಾಖೆ ಮುಖ್ಯಸ್ಥರಿಗೆ ಹಾಗೂ ದೆಹಲಿ ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್ ನೀಡಿದೆ. ಅಲ್ಲದೇ ವಿಚಾರಣೆಯನ್ನ ಮಧ್ಯಾಹ್ನ 3 ಗಂಟೆಗೆ ಮುಂದೂಡಿದೆ.

ಇನ್ನು, ರಂಜನ್ ಗೋಗಯ್ ತಮ್ಮ ಮೇಲಿನ ಆರೋಪವನ್ನ ಖಂಡಿಸಿ, ಅಲ್ಲಗಳೆದಿದ್ದಾರೆ. ಆರೋಪ ಸಂಬಂಧ ನಿನ್ನೆ ಸುಪ್ರೀಂಕೋರ್ಟ್​, ಪ್ರಕರಣದ ವಿಚಾರಣೆ ನಡೆಸಲು ಮೂವರು ಸದಸ್ಯರ ವಿಶೇಷ ತಂಡ ರಚನೆ ಮಾಡಿತ್ತು. ಸುಪ್ರೀಂಕೋರ್ಟ್​ನ ಜಸ್ಟೀಸ್ ಎಸ್ ಎ. ಬೊಬ್ಡೆ ನೇತೃತ್ವದ ಮೂರು ಸದಸ್ಯರ ಆಂತರಿಕ ಸಮಿತಿಯನ್ನು ರಚಿಸಲಾಗಿದೆ. ಈ ತನಿಖಾ ಸಮಿತಿಯಲ್ಲಿ ನ್ಯಾಯಮೂರ್ತಿಗಳಾದ ಎನ್. ವಿ.ರಮಣ ಮತ್ತು ಇಂದಿರಾ ಬ್ಯಾನರ್ಜಿ ಸದಸ್ಯರಾಗಿದ್ದಾರೆ. ಈ ಸಮಿತಿ ಮುಂದಿನ ಶುಕ್ರವಾರದಿಂದ ವಿಚಾರಣೆಯನ್ನ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಕೋರ್ಟ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಉದ್ಯೋಗಿ ಒಬ್ಬರು ಸಿಜೆಐ ನಿವಾಸದಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಅಂತಾ ಆರೋಪಿಸಿದ್ದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv