ಡೈಜೆಷನ್ ಸಮಸ್ಯೆನಾ..? ಇಲ್ಲಿದೆ ಸಿಂಪಲ್​ ಪರಿಹಾರ..!

ಇತ್ತೀಚಿನ ದಿನಗಳಲ್ಲಿ ಮನೆ ಅಡುಗೆ ತಿನ್ನವವರ ಸಂಖ್ಯೆ ಕಡಿಮೆ ಆಗಿದೆ. ಕೆಲಸದ ಒತ್ತಡ, ಸಮಯದ ಅಭಾವದಿಂದ ಊಟದ ಬಗ್ಗೆ ಹೆಚ್ಚಾಗಿ ಯಾರೂ ಗಮನ ಕೊಡೋದಿಲ್ಲ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ ಬಗ್ಗೆ ಯಾರೂ ಅಷ್ಟೊಂದು ತಲೆ ಕೆಡಿಸಿಕೊಳ್ಳಲ್ಲ. ದಿನೇ ದಿನೇ ನೆಗ್ಲೆಟ್​ ಮಾಡಿದ್ರೆ ಭಾರೀ ಡೇಂಜರ್. ದಿನ ಕಳೆದಂತೆ ಕರುಳಿನ ಕಾಯಿಲೆ (ಐಬಿಡಿ), ಹೊಟ್ಟೆ ಸೆಳೆತ, ಗ್ಯಾಸ್​, ವಾಕರಿಕೆ ಮತ್ತು ಎದೆಯುರಿಯಂತಹ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ.

1. ಆಹಾರವನ್ನ ಚೆನ್ನಾಗಿ ಅಗಿದು ತಿನ್ನಿ
ಆಹಾರವನ್ನ ಚೆನ್ನಾಗಿ ಅಗಿದು ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಅದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಕೆಲಸವನ್ನು ಸರಾಗಗೊಳಿಸುತ್ತದೆ. ಆದ್ದರಿಂದ ನಿಮ್ಮ ದೇಹವು ಇತರ ಕ್ರಿಯೆಗಳ ಮೇಲೆ ಕೇಂದ್ರೀಕರಿಸುತ್ತದೆ. ನಿಧಾನವಾಗಿ ಆಹಾರವನ್ನ ಸೇವಿಸುವುದನ್ನ ಅಭ್ಯಾಸ ಮಾಡಿಕೊಳ್ಳಿ.

2. ಫೈಬರ್​ ಅಂಶ ಹೆಚ್ಚಿರಲಿ
ಜೀರ್ಣಕ್ರಿಯೆಯಲ್ಲಿ ಫೈಬರ್ ಪ್ರಮುಖ ಪಾತ್ರ ವಹಿಸುತ್ತದೆ. ಫೈಬರ್​ನಲ್ಲಿ ಕರಗಬಲ್ಲ ಫೈಬರ್ ಮತ್ತು ಕರಗದ ಫೈಬರ್ ಎರಡನ್ನೂ ಬಳಸಿಕೊಳ್ಳುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿರಲು ಸಹಾಯ ಮಾಡುತ್ತವೆ. ಹಣ್ಣುಗಳು, ತರಕಾರಿಗಳು, ಗೋಧಿ ಹೊಟ್ಟು ಧಾನ್ಯಗಳು, ಓಟ್ ಮೀಲ್​ ಮತ್ತು ಕಾಳುಗಳಲ್ಲಿ ಫೈಬರ್​ ಅಂಶ ಹೆಚ್ಚಿರುವ ಆಹಾರ ಸೇವಿಸಿ.

3. ದ್ರವ ಆಹಾರಗಳನ್ನ ಸೇವಿಸಿ
ಸಾಕಷ್ಟು ನೀರು ಕುಡಿಯುವುದರಿಂದ ಜೀರ್ಣಕ್ರಿಯೆ  ಸರಾಗವಾಗಲು ಸಹಾಯವಾಗುತ್ತದೆ. ನೀರು ಮತ್ತು ತಾಜಾ ಹಣ್ಣಿನ ರಸಗಳು, ನಿಂಬೆ ಹಣ್ಣಿನ ಜ್ಯೂಸ್​ ಅಥವಾ ಎಳೆ ನೀರನ್ನ ಹೆಚ್ಚಾಗಿ ಸೇವಿಸಿ. ಇದು ನಿಮ್ಮನ್ನ ಡಿಹೈಡ್ರೇಷನ್​ ಸಮಸ್ಯೆಯಿಂದ ಪಾರು ಮಾಡುತ್ತದೆ.

4. ನಿಯಮಿತವಾಗಿ ವ್ಯಾಯಾಮಗಳನ್ನ ಮಾಡಿ
ಉತ್ತಮ ಆರೋಗ್ಯಕ್ಕೆ ವ್ಯಾಯಾಮ ಬಹಳ ಮುಖ್ಯ. ವಾಕಿಂಗ್​, ಈಜು, ಯೋಗ ಅಥವಾ ಜಾಗಿಂಗ್​ ಮಾಡುವುದರಿಂದ ನೀವು ಹೆಚ್ಚು ಆ್ಯಕ್ಟಿವ್​ ಆಗಿರುತ್ತೀರಾ. ಇದು ಹೆಲ್ದಿ ಡೈಜೇಷನ್​ಗೆ ಸಹಾಯ ಮಾಡುತ್ತದೆ.

5. ಹೆಲ್ದಿ ಫ್ಯಾಟ್​ ಸೇವಿಸಿ
ಚೀಸ್, ಆಲಿವ್ ಎಣ್ಣೆ, ಮೊಟ್ಟೆ, ಆವಕಾಡೊ ಮತ್ತು ಮೀನುಗಳಂತಹ ಆರೋಗ್ಯಕರ ಕೊಬ್ಬನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಜೊತೆಗೆ ಒಮೆಗಾ -3 ಕೊಬ್ಬಿನಾಮ್ಲಗಳು ಉರಿಯೂತವನ್ನು ಕಡಿಮೆ ಮಾಡುತ್ತವೆ. ಇದು ಕರುಳಿನ ಕಾಯಿಲೆಗಳನ್ನು ತಡೆಯಬಹುದು. ಆದ್ದರಿಂದ, ನಿಮ್ಮ ಆಹಾರದಲ್ಲಿ ಅಗಸೆ ಬೀಜಗಳು ಮತ್ತು ಕುಂಬಳಕಾಯಿ ಬೀಜಗಳನ್ನು ಸೇವಿಸುವುದನ್ನ ಅಭ್ಯಾಸ ಮಾಡಿಕೊಳ್ಳಿ.

6. ಸ್ಟ್ರೆಸ್​ ಕೆಡಿಮೆ ಮಾಡಿಕೊಳ್ಳಿ
ಸಾಮಾನ್ಯವಾಗಿ, ಒತ್ತಡವು ನಿಮ್ಮ ಆರೋಗ್ಯದ ಮೇಲೆ ನಕರಾತ್ಮಕ ಪ್ರಭಾವ ಬೀರಬಹುದು. ಹೊಟ್ಟೆ ಹುಣ್ಣು, ಅತಿಸಾರ, ಮಲಬದ್ಧತೆ ಮತ್ತು IBS ಸಮಸ್ಯೆಗಳನ್ನ ತಂದೊಡ್ಡುತ್ತದೆ. ಕೆಲವು ಉಸಿರಾಟದ ವ್ಯಾಯಾಮಗಳು, ಧ್ಯಾನ ಅಥವಾ ಯೋಗದೊಂದಿಗೆ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಬಹಳ ಮುಖ್ಯ.